ಹಮಾಸ್ ಮುಖಂಡ ಯಾಹ್ಯಾ ಸಿನ್ವರ್ ಸುರಕ್ಷಿತ ನಿರ್ಗಮನಕ್ಕೆ ಅವಕಾಶ: ಹೊಸ ಪ್ರಸ್ತಾಪ ಮುಂದಿಟ್ಟ ಇಸ್ರೇಲ್

Prasthutha|

ಗಾಝಾ: ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು ಮತ್ತು ಗಾಝಾದ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಬೇಕು. ಅದಕ್ಕೆ ಪ್ರತಿಯಾಗಿ ಗಾಝಾದಿಂದ ಹಮಾಸ್ ಮುಖಂಡ ಯಾಹ್ಯಾ ಸಿನ್ವರ್ ಸುರಕ್ಷಿತವಾಗಿ ನಿರ್ಗಮಿಸುವುದಕ್ಕೆ ಅವಕಾಶ ನೀಡುತ್ತೇವೆ ಎಂಬ ಹೊಸ ಪ್ರಸ್ತಾಪವನ್ನು ಇಸ್ರೇಲ್ ಮುಂದಿರಿಸಿದೆ.

- Advertisement -

ಸಿನ್ವರ್ ಮತ್ತು ಅವರ ಕುಟುಂಬದವರಿಗಲ್ಲದೆ ಅವರೊಂದಿಗೆ ಸೇರಲು ಬಯಸುವವರಿಗೂ ಸುರಕ್ಷಿತ ನಿರ್ಗಮನಕ್ಕೆ ಅವಕಾಶ ಮಾಡಿಕೊಡುತ್ತೇವೆ.ಒತ್ತೆಯಾಳುಗಳು ತಾಯ್ನಾಡಿಗೆ ಮರಳುವುದು ನಮಗೆ ಮುಖ್ಯವಾಗಿದೆ. ಗಾಝಾವನ್ನು ಮಿಲಿಟರಿ ರಹಿತ ಪ್ರದೇಶವನ್ನಾಗಿಸಲು ಮತ್ತು ಗಾಝಾವನ್ನು ನಿರ್ವಹಿಸಲು ಹೊಸ ವ್ಯವಸ್ಥೆಯನ್ನು ನಾವು ಬಯಸುತ್ತೇವೆ ಎಂದು ಇಸ್ರೇಲ್‍ನ ಒತ್ತೆಯಾಳು ಬಿಡುಗಡೆ ಮಾತುಕತೆಯ ರಾಯಭಾರಿ ಗಾಲ್ ಹಿರ್ಷ್ ಹೇಳಿದ್ದಾರೆಂದು `ಬ್ಲೂಮ್‍ಬರ್ಗ್ ನ್ಯೂಸ್’ ವರದಿ ಮಾಡಿದೆ.

ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸಲೂ ಇಸ್ರೇಲ್ ಸಿದ್ಧವಿದೆ. ಕದನ ವಿರಾಮದ ನಿರೀಕ್ಷೆಗಳು ಹುಸಿಯಾಗುತ್ತಿರುವಾಗ ಹೊಸ ಪರಿಹಾರ ರೂಪಿಸುವ ಪ್ರಯತ್ನದ ಭಾಗವಾಗಿ ಈ ಪ್ರಸ್ತಾಪವನ್ನು ಮಂಡಿಸಲಾಗಿದೆ. ಅಮೆರಿಕ, ಖತರ್ ಮತ್ತು ಈಜಿಪ್ಟ್ ಗಳು ಹೊಸ ಕದನ ವಿರಾಮ ಯೋಜನೆಯನ್ನು ರೂಪಿಸಲು ಕಾರ್ಯನಿರತವಾಗಿದ್ದರೆ ಹಮಾಸ್ ಮಾತುಕತೆಗಿಂತ ಷರತ್ತುಗಳನ್ನು ಮುಂದಿರಿಸಲು ಆಸಕ್ತವಾಗಿದೆ ಎಂದು ಗಾಲ್ ಹಿರ್ಷ್ ಹೇಳಿದ್ದಾರೆ.

- Advertisement -

ಮೇ ತಿಂಗಳಿನಲ್ಲೂ ಹಮಾಸ್ ಮುಖಂಡರಿಗೆ ಸುರಕ್ಷಿತ ನಿರ್ಗಮನದ ಬಗ್ಗೆ ಇಸ್ರೇಲ್ ಮುಖಂಡರು ಪ್ರಸ್ತಾಪಿಸಿದ್ದರು.



Join Whatsapp