2022ರಲ್ಲಿ ಇಸ್ರೇಲ್’ನಿಂದ 47 ಮಕ್ಕಳು ಸೇರಿ 257 ಮಂದಿ ಫೆಲೆಸ್ತೀನಿಯರ ಹತ್ಯೆ: ವರದಿ ಬಿಡುಗಡೆ

Prasthutha|

ಫೆಲೆಸ್ತೀನ್: ಫೆಲೆಸ್ತೀನ್ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿ ಅಂಶ ಪ್ರಕಾರ, 2022ರ ಕೊಲೆಘಾತಕ ವರ್ಷದಲ್ಲಿ ಇಸ್ರೇಲಿಗರು 257 ಫೆಲೆಸ್ತೀನಿಯನ್ನರನ್ನು ಹತ್ಯೆಗೈದಿದ್ದು, ಇದರಲ್ಲಿ 47 ಮಂದಿ ಮಕ್ಕಳು ಸೇರಿದ್ದಾರೆ.
ಡಿಸೆಂಬರ್ 12ರಂದು 16ರ ತರುಣಿ ಜೆನಿಮ್ ತನ್ನ ಮನೆಯ ಮಾಡಿನಿಂದ ಇಸ್ರೇಲ್ ದಾಳಿಯನ್ನು ನೋಡುವಾಗ ಅವಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಇಂತಹ ಘಟನೆಗಳೇ ಅಧಿಕವಾಗಿದೆ.
ಡಿಸೆಂಬರ್ 2ರಂದು ಇಸ್ರೇಲ್ ಸೇನೆಯು 23ರ ತರುಣನನ್ನು ಕೊಂದಿತು. ಇದನ್ನು ಚಿತ್ರೀಕರಿಸಲಾಗಿದೆ.
ವಿಶ್ವ ಸಂಸ್ಥೆಯ ಓಸಿಎಚ್ಎ- ಮಾನವೀಯ ಸಂಬಂಧಗಳ ಸಹಯೋಗವು 2022ರ ಮೊದಲ ಎಂಟು ತಿಂಗಳಲ್ಲಿ ಇಸ್ರೇಲಿ ಸೈನಿಕರು 590 ಫೆಲೆಸ್ತೀನಿಯನ್ನರಿಗೆ ಸೇರಿದ ಕಟ್ಟಡಗಳನ್ನು ಧ್ವಂಸಗೊಳಿಸಿದ್ದಾರೆ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ 707 ಫೆಲೆಸ್ತೀನಿಯರನ್ನ ಒಕ್ಕಲೆಬ್ಬಿಸಿದ್ದಾರೆ.
ಇನ್ನು ಇದೇ ವರ್ಷ ದಾನಿಗಳ ಸಹಾಯದಿಂದ ಫೆಲೆಸ್ತೀನಿಯರಿಗೆ ಕಟ್ಟಿದ 97 ಕಟ್ಟಡಗಳನ್ನು ಕೂಡ ಇಸ್ರೇಲಿಗರು ಕೆಡವಿದ್ದಾರೆ. ಈ ಮೂಲಕ ಫೆಲೆಸ್ತೀನಿಯರಿಗೆ ಸಹಾಯ ಬರುವುದನ್ನೂ ಕಷ್ಟ ಮಾಡಿದ್ದಾರೆ. ಅಲ್ಲದೆ ಹೆಂಗಸರು ಮಕ್ಕಳು ಸೇರಿ 2022ರಲ್ಲಿ ಡಿಸೆಂಬರ್ 10ರವರೆಗೆ 6,500 ಫೆಲೆಸ್ತೀನಿಯರನ್ನು ಇಸ್ರೇಲಿ ಸೈನಿಕರು ಬಂಧಿಸಿದ್ದಾರೆ.



Join Whatsapp