ಕೋವಿಡ್‌ ಸಾಂಕ್ರಾಮಿಕತೆ ಭೀತಿ | ಯುಎಇಗೆ ಪ್ರಯಾಣಿಸುವ ಇಸ್ರೇಲಿಗರಿಗೆ ಕಠಿಣ ಎಚ್ಚರಿಕೆ

Prasthutha|

ಜೆರುಸಲೇಂ : ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ಗೆ ಪ್ರಯಾಣಿಸುವವರಿಗೆ ಇಸ್ರೇಲ್‌ ಕಠಿಣ ಎಚ್ಚರಿಕೆಯನ್ನು ನೀಡಿದೆ. ಇಸ್ರೇಲಿಗರು ಸದ್ಯಕ್ಕೆ ಪ್ರಯಾಣಿಸಬಾರದ ದೇಶಗಳಲ್ಲಿ ಯುಎಇಯನ್ನು ಕೂಡ ಸೇರಿಸಲಾಗಿದೆ ಎಂದು ಇಸ್ರೇಲ್‌ ಆರೋಗ್ಯ ಸಚಿವಾಲಯದ ಮೂಲಗಳನ್ನಾಧರಿಸಿ ವರದಿಯೊಂದು ತಿಳಿಸಿದೆ.

- Advertisement -

ಇಸ್ರೇಲಿಗರು ಪ್ರಯಾಣಿಸ ಬಾರದ ದೇಶಗಳಲ್ಲಿ ಪೆರುವನ್ನು ಕೈಬಿಡಲಾಗಿದೆ ಮತ್ತು ಯುಎಇ, ಉರುಗ್ವೆ, ಇಥಿಯೋಪಿಯಾ, ಬೊಲಿವಿಯಾ, ಮಾಲ್ಡೀವ್ಸ್‌, ನಮೀಬಿಯಾ, ನೇಪಾಳ, ಪೆರುಗ್ವೆ, ಚಿಲಿ, ಕೊಲಂಬಿಯಾ, ಕೋಸ್ಟರಿಕಾ, ತ್ಸುನಿಯಾ ಮುಂತಾದ ದೇಶಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ.

ಈ ದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಸುಧಾರಣೆ ಕಂಡುಬರದಿದ್ದಲ್ಲಿ, ಈ ದೇಶಗಳಿಗೆ ಇಸ್ರೇಲಿಗರು ಪ್ರಯಾಣಿಸುವುದನ್ನು ನಿಷೇಧಿಸಲಾಗುತ್ತದೆ ಎಂದು ಸಚಿವಾಲಯದ ಸೂಚನೆಯಲ್ಲಿ ತಿಳಿಸಲಾಗಿದೆ. ಕೋವಿಡ್‌ ಅಪಾಯವಿರುವ ದೇಶಗಳಿಗೆ ಪ್ರಯಾಣಿಸಿದವರು ಕಠಿಣ ಕೋವಿಡ್‌ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.  

Join Whatsapp