ನವದೆಹಲಿ: ಇಸ್ರೇಲ್ ಮೇಲೆ ಇರಾನ್ ವೈಮಾನಿಕ ದಾಳಿ ನಡೆಸಲು ಸಜ್ಜಾಗಿದೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಭಾರತೀಯ ವಿದೇಶಾಂಗ ಇಲಾಖೆ ಭಾರತೀಯರು ಇಸ್ರೇಲ್ ಮತ್ತು ಇರಾನ್ ದೇಶಕ್ಕೆ ತೆರಳದಂತೆ ಸೂಚನೆ ನೀಡಿದೆ.
ಇಸ್ರೇಲ್ ಮೇಲೆ ಇರಾನ್ ಯುದ್ಧ ಆರಂಭಿಸಿವು ಸಾಧ್ಯತೆಗಳಿವೆ ಎಂದು ಆತಂಕಗೊಂಡಿರುವ ಭಾರತೀಯ ವಿದೇಶಾಂಗ ಇಲಾಖೆ ತುರ್ತು ಮಾರ್ಗಸೂಚಿ ಪ್ರಕಟಿಸಿದೆ. ಸದ್ಯ ಇರಾನ್ ಹಾಗೂ ಇಸ್ರೇಲ್ ಪ್ರಯಾಣ ಮುಂದೂಡಿ ಅಥವಾ ರದ್ದು ಮಾಡಿ ಎಂದು ಭಾರತೀಯರಿಗೆ ಮನವಿ ಮಾಡಿದೆ.
ಸಿರಿಯಾದಲ್ಲಿ ಇರಾನ್‌ನ ಕೌನ್ಸುಲೇಟ್ ಸೇರಿದಂತೆ 6 ಅಧಿಕಾರಿಗಳ ಹತ್ಯೆಯಾಗಿದೆ. ಈ ಹತ್ಯೆಯ ಹಿಂದೆ ಇಸ್ರೇಸ್ ಕೈವಾಡವಿದೆ ಎಂದು ಇರಾನ್ ಹೇಳಿದೆ. ಇದಕ್ಕೆ ಪ್ರತೀಕಾರವಾಗಿ ನಡೆಸುವುದಾಗಿಯೂ ಹೇಳಿದೆ.
ಈಗಾಗಲೇ ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಯುದ್ಧ ನಡೆಯುತ್ತಿರುವ ಕಾರಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಎಚ್ಚರಿಸಿದೆ.