ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯತ್ವ ನಿರ್ಣಯದ ಪ್ರತಿಯನ್ನು ಹರಿದು ಹಾಕಿದ ಇಸ್ರೇಲ್

Prasthutha|

ವಿಶ್ವಸಂಸ್ಥೆ: ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯತ್ವ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ವಿಶ್ವಸಂಸ್ಥೆಯಲ್ಲಿನ ಇಸ್ರೇಲ್‌ ರಾಯಭಾರಿ ಗಿಲಾಡ್‌ ಎರ್ಡಾನ್‌ ನಿರ್ಣಯದ ಪ್ರತಿಯನ್ನು ಹರಿದು ಹಾಕಿದ ಘಟನೆ ನಡೆದಿದೆ.

- Advertisement -

ಈ ವೇಳೆ ಮಾತನಾಡಿದ ಎರ್ಡಾನ್‌, ಪ್ಯಾಲೆಸ್ತೀನ್‌ಗೆ ಸದಸ್ಯತ್ವ ನೀಡುವುದು ಅನೈತಿಕ ಕ್ರಮ, ಆಧುನಿಕ ಯುಗ ನಾಜಿಗಳಿಗೆ ವಿಶ್ವಸಂಸ್ಥೆಯೇ ಮುಕ್ತ ಸ್ವಾಗತ ನೀಡಿದಂತೆ ಎಂದಿದ್ದಾರೆ.

ಪ್ಯಾಲೆಸ್ತೀನ್‌ಗೆ ಸದಸ್ಯತ್ವ ನೀಡುವುದಕ್ಕೆ ಭಾರತ ಸೇರಿ 143 ರಾಷ್ಟ್ರ ಬೆಂಬಲ ವ್ಯಕ್ತಪಡಿಸಿದೆ. ಅಮೆರಿಕ, ಇಸ್ರೇಲ್‌ ಸೇರಿ 9 ರಾಷ್ಟ್ರಗಳು ಸದಸ್ಯತ್ವ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಮತ ಹಾಕಿವೆ. 25 ದೇಶ ಮತದಾನದಿಂದ ದೂರ ಉಳಿದಿವೆ.

- Advertisement -



Join Whatsapp