ಇಸ್ರೇಲ್ – ಹಮಾಸ್ ಯುದ್ಧದ ಪರಿಣಾಮ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

Prasthutha|

ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ಕಚ್ಛಾ ತೈಲ ಬೆಲೆಗಳು ಹೆಚ್ಚಳಗೊಂಡಿವೆ.

- Advertisement -

ವಿಶ್ವದ ಪ್ರಮುಖ ಬೆಂಚ್​ಮಾರ್ಕ್​ ಗಳೆನಿಸಿದ ಡಬ್ಲ್ಯುಟಿಐ ಮತ್ತು ಬ್ರೆಂಡ್ ಕ್ರ್ಯೂಡ್​ನಲ್ಲಿ ಕಚ್ಛಾ ತೈಲ ಬೆಲೆ ಶೇ. 4ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಏರಿಕೆ ಆಗಿದೆ.

ಇಸ್ರೇಲ್, ಪ್ಯಾಲಸ್ಟೀನ್ ಪ್ರದೇಶಗಳಲ್ಲಿ ತೈಲ ಉತ್ಪಾದನೆ ಆಗದೇ ಹೋದರೂ ಅದರ ಸುತ್ತಲೂ ತೈಲ ಉತ್ಪಾದಕ ದೇಶಗಳಿದ್ದು, ಈ ಯುದ್ಧದಿಂದ ಆ ದೇಶಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಬಹಳ ಹೆಚ್ಚಿದೆ. ಈ ಕಾರಣಕ್ಕೆ ಕಚ್ಛಾ ತೈಲ ಬೆಲೆಗಳು ಏರಿಕೆ ಕಂಡಿವೆ.

- Advertisement -

ಸಾಕಷ್ಟು ತೈಲ ರಫ್ತು ಮಾಡುವ ಇರಾನ್ ದೇಶ ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಭಾಗಿಯಾದರೆ ತೈಲ ಸರಬರಾಜಿಗೆ ಧಕ್ಕೆ ಆಗಲಿದೆ. ಒಂದು ಅಂದಾಜು ಪ್ರಕಾರ ಇರಾನ್ ದೇಶ ಯುದ್ಧದಲ್ಲಿ ಮುಳುಗಿಹೋದರೆ ಜಾಗತಿಕ ತೈಲ ಪೂರೈಕೆಯಲ್ಲಿ ಶೇ. 3ರಷ್ಟು ವ್ಯತ್ಯಯವಾಗಬಹುದು. ಮತ್ತೊಂದು ಪ್ರಮುಖ ತೈಲ ಉತ್ಪಾದಕ ದೇಶವಾದ ಸೌದಿ ಅರೇಬಿಯಾ ಕೂಡ ಹಮಾಸ್ ನನ್ನು ಬೆಂಬಲಿಸಿದೆ.