ಇಸ್ರೇಲ್-ಹಮಾಸ್ ಸಂಘರ್ಷ: ಫೆಲೆಸ್ತೀನಿ ಬಾಲಕನನ್ನು ಹತ್ಯೆಗೈದ ಅಮೆರಿಕದ ಮನೆ ಮಾಲಕ

Prasthutha|

ವಾಷಿಂಗ್ಟನ್: ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ 71 ವರ್ಷದ ಮನೆ ಮಾಲಕನೊಬ್ಬ ಫೆಲೆಸ್ತೀನಿ ಯ ಮುಸ್ಲಿಂ ಬಾಲಕನನ್ನು 26 ಬಾರಿ ತಿವಿದು ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

- Advertisement -


ಹತ್ಯೆಗೀಡಾದ ಬಾಲಕನನ್ನು ವದೀಯ ಅಲ್-ಫಯೋಮ್ ಎಂದು ಗುರುತಿಸಲಾಗಿದೆ. ಆರೋಪಿ ಜೋಸೆಫ್ ಹಣೆಗೆ ಗಾಯವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾಲಕನ ತಾಯಿ ಮೇಲೂ ಹಲ್ಲೆ ನಡೆಸಲಾಗಿದೆ. ಶವ ಪರೀಕ್ಷೆಯ ಸಮಯದಲ್ಲಿ ಬಾಲಕನ ಹೊಟ್ಟೆಯಿಂದ 7 ಇಂಚಿನ ಬ್ಲೇಡ್ ಮಾದರಿಯ ಚಾಕುವನ್ನು ಹೊರ ತೆಗೆಯಲಾಗಿದೆ.


ಪೊಲೀಸರು ಆಗಮಿಸಿದಾಗ ಮಹಿಳೆಯ ಹಣೆಗೆ ಗಂಭೀರವಾಗಿ ಗಾಯವಾಗಿತ್ತು, ಪ್ರಕರಣ ದಾಖಲಿಸುವ ಮೊದಲು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.



Join Whatsapp