ಇಸ್ರೇಲ್-ಹಮಾಸ್ ಕದನ ವಿರಾಮ ಮತ್ತೆ ವಿಸ್ತರಣೆ

Prasthutha|

ಟೆಲ್ ಅವೀವ್: ಕದನ ವಿರಾಮವನ್ನು ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಲು ಇಸ್ರೇಲ್ ಹಾಗೂ ಹಮಾಸ್ ಗುರುವಾರ ತೀರ್ಮಾನಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಕೆಲವು ಮಾದ್ಯಮಗಳು ಒಂದು ದಿನ ಕದನ ವಿರಾಮ ವಿಸ್ತರಣೆ ಎಂದೂ ವರದಿ ಮಾಡಿವೆ. ಒಟ್ಟಿನಲ್ಲಿ ಪ್ಯಾಲೆಸ್ತೀನ್ ಹೋರಾಟಗಾರರ ವಶದಲ್ಲಿರುವ ಒತ್ತೆಯಾಳುಗಳ ಹಾಗೂ ಇಸ್ರೇಲ್‌ನ ಬಂಧನದಲ್ಲಿರುವ ಪ್ಯಾಲೆಸ್ತೀನಿಯರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆಯು ಮುಂದುವರಿಯುವ ಹಾಗೂ ಗಾಝಾದ ಮೇಲೆ ಇಸ್ರೇಲ್‌ನ ದಾಳಿ ಸ್ಥಗಿತಗೊಳ್ಳುವ ಉದ್ದೇಶವನ್ನು ಪ್ರಸ್ತುತ ಕದನ ವಿರಾಮ ವಿಸ್ತರಣೆಯ ಹೊಂದಿದೆ.

- Advertisement -

ನಾಲ್ಕು ದಿನಗಳ ಕದನವಿರಾಮವು ಕಳೆದ ಶುಕ್ರವಾರ ಆರಂಭಗೊಂಡಿದ್ದು ಮಂಗಳವಾರ ಕೊನೆಗೊಂಡಿತ್ತು. ಮತ್ತೆ ಎರಡು ವಿಸ್ತರಣೆ ಹೊಂದಿ ಗುರುವಾರ ಕೊನೆಗೊಂಡಿತ್ತು. ಮತ್ತೂ ವಿಸ್ತರಣೆ ಹೊಂದಿದ ಕದನ ವಿರಾಮ ಇನ್ನಷ್ಟು ವಿಸ್ತರಣೆಯಾಗುವ ಹಾಗೂ ಗಾಝಾಕ್ಕೆ ಮಾನವೀಯ ನೆರವು ಅಧಿಕ ಪ್ರಮಾಣದಲ್ಲಿ ಹರಿದುಬರಲು ಸಾಧ್ಯವಾಗುವ ಆಶಾವಾದ ಮೂಡಿಸಿದೆ.

ಕದನ ವಿರಾಮದ ಆರನೇ ದಿನವಾದ ಗುರುವಾರ ಒಪ್ಪಂದದಂತೆ ಹಮಾಸ್‌ 16 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಅತ್ತ ಪ್ಯಾಲೆಸ್ಟೀನ್‌ನ 30 ನಾಗರಿಕರನ್ನು ಇಸ್ರೇಲ್ ಬಿಡುಗಡೆ ಮಾಡಿದೆ ಎಂದು ಕತಾರ್‌ನ ವಿದೇಶಾಂಗ ಸಚಿವಾಲಯ ಹೇಳಿದೆ. ಇವರಲ್ಲಿ ಆಕ್ಟಿವಿಸ್ಟ್‌ ಅಹೆದ್ ತಮೀಮಿ ಕೂಡ ಇದ್ದಾರೆ. 2017ರಲ್ಲಿ ಇಸ್ರೇಲ್‌ ಸೈನಿಕನಿಗೆ ಈಕೆ ಕಪಾಳಮೋಕ್ಷ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಬಳಿಕ ವೆಸ್ಟ್‌ ಬ್ಯಾಂಕ್‌ನ ಆಕೆಯ ಮನೆಯಲ್ಲಿಇಸ್ರೇಲ್‌ ಸೇನೆಯು ಬಂಧಿಸಿತ್ತು. ಇನ್‌ಸ್ಟಾಗ್ರಾಂನಲ್ಲಿ ಭಯೋತ್ಪಾದನೆಗೆ ಆಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿತ್ತು

- Advertisement -

ಪ್ರತಿ 10 ಹೆಚ್ಚುವರಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದಂತೆ ತಾನು ಕದನ ವಿರಾಮವನ್ನು ವಿಸ್ತರಿಸುವುದಾಗಿ ಇಸ್ರೇಲ್ ಹೇಳಿದೆ ಎಂದು ಸುದ್ದಿಯಾಗಿದೆ.

.



Join Whatsapp