ಹಮಾಸ್ ನಾಯಕನ ಮನೆ ಮೇಲೆ ಬಾಂಬ್ ದಾಳಿ ನಡೆಸಿದ ಇಸ್ರೇಲ್

Prasthutha|

ಜೆರುಸಲೇಮ್: ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ಸಂಘರ್ಷ ಸತತ ಏಳನೇ ದಿನವೂ ಅಬಾಧಿತವಾಗಿ ಮುಂದುವರಿಯುತ್ತಿದ್ದು, ಹಮಾಸ್ ನಾಯಕನ ನಿವಾಸದ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸುವ ಮೂಲಕ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸುವ ಸೂಚನೆ ನೀಡಿದೆ.

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ.ಈ ದಾಳಿಗೆ ಪ್ರತ್ಯುತ್ತರವಾಗಿ ಹಮಾಸ್ ಇಸ್ರೇಲ್ ನ ರಾಜಧಾನಿಯಾದ ಟೆಲ್ ಅವೀವ್‌ಗೆ ರಾಕೆಟ್ ಉಡಾಯಿಸಿದೆ. ಹಮಾಸ್ ಉಡಾಯಿಸಿದ ರಾಕೆಟ್‌ಗಳಿಗೆ ಎಚ್ಚರಿಕೆ ಸೈರನ್ ಮೊಳಗಿದ್ದರಿಂದಾಗಿ ಇಸ್ರೇಲ್ ನಿವಾಸಿಗಳು ಸುರಕ್ಷಿತ ಸ್ಥಳವಾದ ‘ಬಾಂಬ್ ಶೆಲ್ಟರ್’ಗೆ ಸ್ಥಳಾಂತರಗೊಂಡಿದ್ದರಿಂದಾಗಿ ಸಾವು ನೋವುಗಳು ಸಂಬವಿಸಲಿಲ್ಲ ಎಂದು ವರದಿಯಾಗಿದೆ.

- Advertisement -