ಇಸ್ರೇಲ್ ಮತ್ತೆ ಅಟ್ಟಹಾಸ: ಗಾಝಾದ ಪುರಾತನ ಚರ್ಚ್ ಮೇಲೆ ದಾಳಿ

Prasthutha|

ಗಾಝಾ: ಕ್ರಿ.ಶ. 425 ರ ಸುಮಾರಿಗೆ ನಿರ್ಮಿಸಲಾಗಿರುವ ಗಾಝಾದ ಅತ್ಯಂತ ಹಳೆಯ ಚರ್ಚ್ ಸೇಂಟ್ ಪೋರ್ಫಿರಿಯಸ್ ಚರ್ಚ್ ಮೇಲೆ ಗುರಿಯಾಗಿಸಿಕೊಂಡು ಇಸ್ರೇಲ್ ಬಾಂಬ್ ದಾಳಿ ಮಾಡಿದೆ.

- Advertisement -

ಸಾವಿನ ಸಂಖ್ಯೆಯನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ ಗುರುವಾರ ತಡರಾತ್ರಿ ಗಾಝಾದ ಪ್ರಾಚೀನ ಚರ್ಚ್ ಅನ್ನು ಇಸ್ರೇಲಿ ನಾಶಪಡಿಸಿದ್ದು, ದಾಳಿಯಲ್ಲಿ ಅನೇಕ ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಗಾಝಾ ನಗರದ ಅಲ್-ಅಹ್ಲಿ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿರುವ ಫೆಲೆಸ್ತೀನ್ ನಾಗರಿಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಚರ್ಚ್ ಮೇಲೆ ದಾಳಿ ನಡೆದಿದೆ.

- Advertisement -



Join Whatsapp