ಜೆರುಸಲೆಮ್ ಜುಲೈ 20 : ಲೆಬನಾನ್ ನಿಂದ ನಡೆದ ರಾಕೆಟ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೈನ್ಯದಿಂದ ಮಂಗಳವಾರ ಬೆಳಿಗ್ಗೆ ಲೆಬನಾನ್ ಮೇಲೆ ಫಿರಂಗಿ ಗುಂಡಿನ ದಾಳಿ ನಡೆಸಿದೆ ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ.
ಈ ಹಿಂದೆ ಲೆಬನಾನ್ ಕಡೆಯಿಂದ 2 ರಾಕೆಟ್‌ಗಳನ್ನು ಲೆಬನಾನ್‌ನಿಂದ ಉತ್ತರ ಇಸ್ರೇಲ್ ಕಡೆಗೆ ಹಾರಿಸಲಾಯಿತು. ಅದರಲ್ಲಿ ಒಂದು ರಾಕೆಟ್ ಅನ್ನು ಐರನ್ ಡೋಮ್ ವಾಯುಪಡೆಯ ರಕ್ಷಣಾ ವ್ಯವಸ್ಥೆಯು ತಡೆಹಿಡಿದರೆ ಇನ್ನೊಂದು ಇಸ್ರೇಲ್‌ನೊಳಗಿನ ತೆರೆದ ಪ್ರದೇಶದಲ್ಲಿ ಬಿದ್ದಿದೆಯೆಂದು ಇಸ್ರೇಲ್ ರಕ್ಷಣಾ ಪಡೆ ಟ್ವೀಟ್‌ನಲ್ಲಿ ಬಹಿರಂಗಪಡಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೈನ್ಯವು ಲೆಬನಾನ್ ನ ಮೇಲೆ ಐಡಿಎಫ್, ಫಿರಂಗಿಗಳ ಮೂಲಕ ದಾಳಿ ಮಾಡುವ ಸೇಡು ತೀರಿಸಿದ್ದೇವೆಂದು ಇಸ್ರೇಲ್ ಹೇಳಿದೆ.
ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಸೈನ್ಯ ಮತ್ತು ಸಶಸ್ತ್ರ ಪ್ಯಾಲೆಸ್ತೀನ್ ಗುಂಪುಗಳ ನಡುವೆ ನಡೆದ 11 ದಿನಗಳ ಸಂಘರ್ಷದ ಸಂದರ್ಭದಲ್ಲಿ ಕೊನೆಯ ಬಾರಿಗೆ ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ರಾಕೆಟ್‌ಗಳನ್ನು ಹಾರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್ ನಿಂದ ದಾಳಿಯು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣ ಮನೆ ಮಾಡಿದೆ.