ಬೈರೂತ್: ದಕ್ಷಿಣ ಲೆಬನಾನ್ನ ಕರಾವಳಿ ನಗರ ನಖೌರಾದಲ್ಲಿ ಸೋಮವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಕಾರೊಂದನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು.
ಲೆಬನಾನ್ನಲ್ಲಿರುವ ವಿಶ್ವಸಂಸ್ಥೆ ಶಾಂತಿಪಾಲನಾ ನಿಯೋಗ(ಯುನಿಫಿಲ್)ದ ಗುತ್ತಿಗೆ ಕೆಲಸಗಾರ ಮತ್ತು ವಿದೇಶದಿಂದ ಬಂದಿದ್ದ ಪ್ರವಾಸಿಯೊಬ್ಬ ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ನ ಆರೋಗ್ಯ ಇಲಾಖೆ ಹೇಳಿದೆ.
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಶಾಂತಿಪಾಲನಾ ನಿಯೋಗದ ಸಿಬ್ಬಂದಿ ಮತ್ತು ವಿದೇಶದಿಂದ ಬಂದಿದ್ದ ಪ್ರವಾಸಿ ಮೃರಪಟ್ಟಿರುವುದು ದೃಢಪಟ್ಟಿದೆ. ಇದು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಯುನಿಫಿಲ್ನ ವಕ್ತಾರೆ ಕ್ಯಾಂಡಿಸ್ ಆಡ್ರಿಯೆಲ್ ಹೇಳಿದ್ದಾರೆಂದು ವರದಿಯಾಗಿದೆ.