ಇಸ್ರೇಲ್ ವೈಮಾನಿಕ ದಾಳಿ: ಮಹಿಳೆ ಸಹಿತ 9 ಮಂದಿ ಫೆಲೆಸ್ತೀನಿಯನ್ನರು ಮೃತ್ಯು

Prasthutha|

ಟೆಲ್ ಅವೀವ್: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಮೇಲೆ ಇಸ್ರೇಲ್ ಸೈನಿಕರು ವೈಮಾನಿಕ ದಾಳಿ ನಡೆಸಿ ಮಹಿಳೆ ಸೇರಿದಂತೆ 9 ಮಂದಿ ಫೆಲೆಸ್ತೀನ್ ಪ್ರಜೆಗಳನ್ನು ಹತ್ಯೆಗೈದಿದ್ದಾರೆ.

- Advertisement -


ಇದು ಎರಡು ದಶಕದಲ್ಲೇ ಒಂದೇ ಬಾರಿಯ ಮಾರಣಾಂತಿಕ ದಾಳಿ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.
ಗಾಜಾ ಕಡೆಯಿಂದ ಇಸ್ರೇಲ್ ಕಡೆಗೆ ಎರಡು ರಾಕೆಟ್ ಗಳು ಹಾರಿ ಬಂದವು, ಅದಕ್ಕೆ ಪ್ರತಿಯಾಗಿ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಇಸ್ರೇಲಿನ ಕ್ಷಿಪಣಿ ನಿರೋಧಕ ವ್ಯವಸ್ಥೆ ಎರಡೂ ರಾಕೆಟ್ ಗಳನ್ನು ತಡೆದವು ಎಂದೂ ಹೇಳಲಾಗಿದೆ.


ಬೆಂಜಮಿನ್ ನೇತನ್ಯಾಹು ಮರಳಿ ಅಧಿಕಾರಕ್ಕೆ ಬಂದ ಮೇಲೆ ಹಮಾಸ್ ಹಿಡಿತದ ಪ್ರದೇಶದ ಮೇಲೆ ನಡೆದಿರುವ ಮೊದಲ ದಾಳಿ ಇದಾಗಿದೆ. ಇಸ್ರೇಲಿ ಕಡೆ ಸಾವು ನೋವು ಆದ ಬಗ್ಗೆ ವರದಿಯಾಗಿಲ್ಲ.
ಜೆನಿನ್ ನಿರಾಶ್ರಿತರ ಶಿಬಿರದ ಸುತ್ತ ರಾಕೆಟ್ ಹಾರಾಟ ಹೆಚ್ಚಾಗಿದೆಯೆಂದೂ, ಇಸ್ರೇಲ್ ಫೆಲೆಸ್ತೀನ್ ಕದನ ಮತ್ತೆ ಗರಿಗೆದರಿರುವುದು ಮುಂದಿನ ವಾರ ಈ ಪ್ರದೇಶಕ್ಕೆ ಯುಎಸ್ ಎ ವಿದೇಶಾಂಗ ಸಚಿವ ಆಂಟನಿ ಬ್ಲಿಂಕಿನ್ಸ್ ಭೇಟಿ ಕೊಡಲಿರುವುದರ ಮೇಲೆ ಕರಿನೆರಳು ಬೀರಿದೆ.

- Advertisement -


ಅಮೆರಿಕ ಮತ್ತು ಇಸ್ರೇಲ್ ಒತ್ತಡವು ಈ ವಲಯದಲ್ಲಿ ಗೊಂದಲ ಹೆಚ್ಚಿಸಿದೆ. ಇಸ್ರೇಲಿ ಸೇನೆಯೊಂದಿಗೆ ಫೆಲೆಸ್ತೀನ್ ಮಾಡಿಕೊಂಡಿರುವ ಶಾಂತಿ ಪಾಲನೆ ಮಾತುಕತೆಗೆ ಬೆಲೆಯಿಲ್ಲವಾದುದರಿಂದ ಆ ಸಂಬಂಧ ಮುರಿದುಕೊಳ್ಳುವುದೇ ಸರಿ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ. ಇಸ್ಲಾಮಿಕ್ ಉಗ್ರರು ಎಂದು ಹೇಳಿ ದಾಳಿ ನಡೆದಿರುವುದು ಯಾರ ಮೇಲೆ ಎಂಬ ಪ್ರಶ್ನೆಯೂ ಮೇಲೆದ್ದಿದೆ.
ಫೆಲೆಸ್ತೀನಿಯರು ಪಶ್ಚಿಮ ದಂಡೆ ಮೇಲೆ ಈಗಾಗಲೇ ಹಿಡಿತ ಬಹುತೇಕ ಕಳೆದುಕೊಂಡಿದ್ದಾರೆ. ಜೆನಿನ್ ಕ್ಯಾಂಪ್ ಮೊದಲಾದೆಡೆ ಉಗ್ರರದೇ ಹಿಡಿತ ಎನ್ನುತ್ತದೆ ಇಸ್ರೇಲ್. ಇದು ದಾಳಿಗೆ ಒಂದು ನೆಪ ಎನ್ನುವವರೂ ಇದ್ದಾರೆ.


ಈ ದಾಳಿಯ ಸೇಡು ತೀರಿಸಿಕೊಳ್ಳುವುದಾಗಿ ಗಾಜಾದ ಹಮಾಸ್ ಗುಂಪು ಹೇಳಿದೆ.



Join Whatsapp