ಇಂಡಿಯನ್ ಸೂಪರ್ ಲೀಗ್ ಸೆಮಿಫೈನಲ್: ಸಮಬಲದ ಹೋರಾಟದಲ್ಲಿ ಫೈನಲ್ ಪ್ರವೇಶಿಸಿದ ಕೇರಳ ಬ್ಲಾಸ್ಟರ್ಸ್ !

Prasthutha|

ಗೋವಾ: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಮೊದಲ ಸೆಮಿಫೈನಲ್’ನ ಎರಡನೇ ಚರಣದ ಪಂದ್ಯದಲ್ಲಿ ಜಮ್ಶೆಡ್’ಪುರ್ ಫುಟ್ಬಾಲ್ ಕ್ಲಬ್ ವಿರುದ್ಧ ರೋಚಕ ಡ್ರಾ ಸಾಧಿಸಿದ ಕೇರಳ ಬ್ಲಾಸ್ಟರ್ಸ್ ತಂಡ ಫೈನಲ್ ಹಂತಕ್ಕೆ ತೇರ್ಗಡೆಯಾಗಿದೆ.
ಗೋವಾದ ತಿಲಕ್ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಪೂರ್ಣಾವಧಿಯ ವೇಳೆಗೆ ಉಭಯ ತಂಡಗಳು 1-1 ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಸೆಮಿಫೈನಲ್’ನ‌ ಮೊದಲ ಚರಣದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವು 1-0 ಗೋಲುಗಳ ಅಂತರದಿಂದ ಗೆದ್ದು ಬೀಗಿತ್ತು. ಈ ಹಿನ್ನೆಲೆಯಲ್ಲಿ ಒಟ್ಟು 2-1 ಗೋಲುಗಳ ಅಂತರದಿಂದ ಬ್ಲಾಸ್ಟರ್ಸ್ ತಂಡವು, 2016ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಫೈಟ್’ಗೆ ಅರ್ಹತೆ ಪಡೆಯಿತು.
ಕೇರಳ ಬ್ಲಾಸ್ಟರ್ಸ್ ಪರವಾಗಿ ಮೊದಲಾರ್ಧದ 18ನೇ ನಿಮಿಷದಲ್ಲಿ ಆಡ್ರಿಯಾನ ಲುನಾ ಗೋಲುಗಳಿಸಿದರೆ, 50ನೇ ನಿಮಿಷದಲ್ಲಿ ಪ್ರೊನಾಯ್ ಹಲ್ದಾರ್ ಗೋಲಿನ ಮೂಲಕ ಜಮ್ಶೆಡ್’ಪುರ್ ಫುಟ್ಬಾಲ್ ಕ್ಲಬ್ ಸಮಬಲ ಸಾಧಿಸಿತು. ಬಳಿಕ ಆಕ್ರಮಣಕಾರಿ ಆಟದ ಬದಲು ಉಭಯ ತಂಡಗಳು ರಕ್ಷಣಾತ್ಮಕವಾಗಿ ಆಡಲು ಹೆಚ್ಚು ಗಮನ ಕೇಂದ್ರೀಕರಿಸಿದ ಪರಿಣಾಮ ಗೋಲು ಗಳಿಸಲು ನಡೆಸಿದ ಪ್ರಯತ್ನಗಳು ಫಲಕೊಡಲಿಲ್ಲ

Join Whatsapp