ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

Prasthutha|

ಕೋಲ್ಕತ್ತಾ: ಇಸ್ಕಾನ್ ತನ್ನ ಗೋಶಾಲೆಗಳಿಂದ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎಂಬ ಆರೋಪ ಮಾಡಿರುವ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರಿಗೆ ಇಸ್ಕಾನ್ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದೆ.

- Advertisement -

ಮೇನಕಾ ಗಾಂಧಿ ಅವರು ಇಸ್ಕಾನ್ ವಿರುದ್ಧ ಮಾತನಾಡಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. “ದೇಶದಲ್ಲಿ ಇಸ್ಕಾನ್ ತನ್ನ ಗೋಶಾಲೆಗಳಿಂದ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ” ಎಂದು ಅವರು ಆರೋಪಿಸಿದ್ದರು.

ಇಸ್ಕಾನ್ ವಿರುದ್ಧ ಸಂಪೂರ್ಣ ಆಧಾರ ರಹಿತ ಆರೋಪ ಮಾಡಿದ್ದಕ್ಕಾಗಿ ಇಂದು ನಾವು ಮೇನಕಾ ಗಾಂಧಿ ಅವರಿಗೆ 100 ಕೋಟಿ ರೂ. ಮಾನನಷ್ಟ ನೋಟಿಸ್ ಕಳುಹಿಸಿದ್ದೇವೆ ಎಂದು ಕೋಲ್ಕತಾ ಇಸ್ಕಾನ್ ಉಪಾಧ್ಯಕ್ಷ ರಾಧಾರಾಮನ್ ದಾಸ್ ತಿಳಿಸಿದ್ದಾರೆ.

- Advertisement -

ಈ ಆರೋಪಗಳಿಂದ ವಿಶ್ವಾದ್ಯಂತ ಇರುವ ಇಸ್ಕಾನ್ ಭಕ್ತರು, ಬೆಂಬಲಿಗರು ಮತ್ತು ಹಿತೈಷಿಗಳಿಗೆ ತೀವ್ರ ನೋವನ್ನುಂಟುಮಾಡಿದೆ ಎಂದು ಹೇಳಿದ ಅವರು, ಇವುಗಳನ್ನು “ದುರುದ್ದೇಶಪೂರಿತ ಆರೋಪಗಳು” ಎಂದು ಅವರು ಹೇಳಿದ್ದಾರೆ.

Join Whatsapp