ನವದೆಹಲಿ: ಉತ್ತರ ಪ್ರದೇಶವು ಪಾಕಿಸ್ತಾನದಲ್ಲಿಯೇ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರದ ಘಟನೆಯನ್ನು ಮುಂದಿಟ್ಟುಕ್ಕೊಂಡು ವಿರೋಧ ಪಕ್ಷದ ನಾಯಕರ ಬಂಧನದ ಕುರಿತು ಬಿಜೆಪಿ ಸರ್ಕಾರವನ್ನು ಅವರು ತೀವ್ರ ತರಾಟೆಗೆ ತೆಗೆದು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಭಾನುವಾರ ಎಂಟು ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಲ್ಲಿ ಸೆಕ್ಷನ್ 144 ನಿರ್ಬಂಧ ಹೇರಿ ಉತ್ತರ ಪ್ರದೇಶ ಸರ್ಕಾರ ವಿರೋಧ ಪಕ್ಷದವರನ್ನು ಬಂಧಿಸುತ್ತಿರುವುದು ವಿಷಾದನೀಯ. ಭಾರತೀಯ ನಾಗರಿಕರಿಗೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳುವುದನ್ನು ತಡೆಯುವುದು ಸರ್ವಾಧಿಕಾರದ ಪರಮಾವಧಿ ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.
ಲಖಿಂಪುರ ಖೇರಿ ಘಟನೆಗೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿಯ ಬಂಧನ, ರಾಹುಲ್ ಗಾಂಧಿ ಅವರನ್ನು ಏರ್ಪೋಟ್ ನಲ್ಲಿ ನಿರ್ಬಂಧ, ಇತರ ರಾಜ್ಯದ ಮುಖ್ಯಮಂತ್ರಿಗಳು ಉ.ಪ್ರ ಕ್ಕೆ ನಿರ್ಬಂಧ ಹೇರುವುದು ಸಂವಿಧಾನದಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದರು.