ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವುದು ಬಜೆಟ್ಟಾ ಅಥವಾ ದಿನಸಿ ಅಂಗಡಿ ಮಾಲೀಕನ ಬಿಲ್ ರಸೀದಿಯಾ?: ವ್ಯಂಗ್ಯವಾಡಿದ ಬಿಜೆಪಿಯ ಹಿರಿಯ ನಾಯಕ

Prasthutha|

ಹೊಸದಿಲ್ಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್‌’ನಲ್ಲಿ ಬುಧವಾರ ಮಂಡಿಸಿದ ಕೇಂದ್ರ ಬಜೆಟ್ ಅನ್ನು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ಎಂದಿನ ಶೈಲಿಯಲ್ಲಿ ಟೀಕಿಸಿದ್ದಾರೆ.

- Advertisement -

 “ಇಂದು ಮಂಡಿಸಿರುವುದು ಬಜೆಟ್ಟಾ ಅಥವಾ ದಿನಸಿ ಅಂಗಡಿ ಮಾಲೀಕನ ಬಿಲ್ ರಸೀದಿಯಾ?” ಎಂದು ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಗಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಯೋಗ್ಯವಾದ ಒಂದು ಬಜೆಟ್ ತನ್ನ ಉದ್ದೇಶಗಳು ಯಾವುದು ಎಂಬುದನ್ನು ಬಹಿರಂಗಪಡಿಸಬೇಕು. ಇದು ಜಿಡಿಪಿ ಬೆಳವಣಿಗೆಯ ದರವಾಗಿದ್ದರೆ ಹೂಡಿಕೆಯ ಮಟ್ಟ ಮತ್ತು ರಿಟರ್ನ್ ದರ, ಆದ್ಯತೆಗಳು, ಆರ್ಥಿಕ ಕಾರ್ಯತಂತ್ರ, ಮತ್ತು ಸಂಪನ್ಮೂಲ ಕ್ರೋಢೀಕರಣ ಮುಂತಾದವುಗಳನ್ನು ಬಹಿರಂಗಪಡಿಸಿ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.  

Join Whatsapp