ಮತ್ತೆ ಶತಕದತ್ತ ಸಾಗುತ್ತಿದೆಯಾ ಈರುಳ್ಳಿ ಬೆಲೆ?ಎರಡೇ ವಾರದಲ್ಲಿ ಬೆಲೆ 60% ಏರಿಕೆ!

Prasthutha|

- Advertisement -

ಮಂಗಳೂರು: ಹಿಂದೊಮ್ಮೆ ಈರುಳ್ಳಿ ಬೆಲೆ ಶತಕ ದಾಟಿ ಗ್ರಾಹಕರ ಕಣ್ಣೀರು ತರಿಸಿತ್ತು. ಇದೀಗ ಮತ್ತೊಮ್ಮೆ ಈರುಳ್ಳಿ ಬೆಲೆ ಜಾಸ್ತಿಯಾಗುತ್ತಾ ಹೊಗ್ತಿದೆ. ಮಂಗಳೂರು ಆಸುಪಾಸು 44 ರಿಂದ 50 ರೂ. ತನಕ ಏರಿಕೆಯಾಗಿದೆ. ಕಳೆದ ಹದಿನೈದು ದಿನಗಳಲ್ಲಿ 60% ಕ್ಕೆ ಏರಿದೆ. ಅದೇ ರೀತಿ ಕಳೆದ ಒಂದು ವಾರದಲ್ಲಿ 18% ಹೆಚ್ಚಾಗಿದೆ. ಡಿಸೆಂಬರ್ ವರೆಗೆ ಈರುಳ್ಳಿ ಬೆಲೆಗಳು ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.ಮುಂಬರುವ ದಿನದಲ್ಲಿ ಇದರ ಬೆಲೆ ಇನ್ನೂ ಹೆಚ್ಚಾಗಲಿದ್ದು, ನೂರು ರೂಗಳನ್ನು ದಾಟಿದರು ಅಚ್ಚರಿ ಪಡಬೇಕಾಗಿಲ್ಲ ಅಂತ ಗ್ರಾಹಕರು ಒಬ್ಬರು ಹೇಳಿದ್ದಾರೆ.

Join Whatsapp