ಸರ್ಕಾರ ಹಿಜಾಬ್ ನಿಷೇಧದ ಪರವಿದೆಯೋ? ಬಿಜೆಪಿ ನಿಲುವಿನ ಜೊತೆಯಿದೆಯೋ? : ಆಲಿಯಾ ಅಸಾದಿ

Prasthutha|

ಉಡುಪಿ: ಕುಂದಾಪುರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಘೋಷಣೆ ಮಾಡಿ ಬಳಿಕ ಅದನ್ನು ತಡೆದು ಹಿಡಿದಿರುವ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಉಡುಪಿಯ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಹಿಜಾಬ್ ನಿಷೇಧದ ನೆಪ ಹೇಳಿ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್ ನಲ್ಲಿ ತಡೆದ ಪ್ರಾಂಶುಪಾಲರಿಗೆ ನೀಡಿದ ಪ್ರಶಸ್ತಿಯನ್ನು ರದ್ದು ಮಾಡಿಲ್ಲವಂತೆ, ತಡೆಹಿಡಿಯಲಾಗಿದೆ ಅಷ್ಟೇ ಎಂದು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಸರಕಾರ ಹಿಜಾಬ್‌ ನಿಷೇಧದ ಪರವಿದೆಯೋ? ಅಂದಿನ BJP ಸರಕಾರದ ನಿಲುವಿನ ಜೊತೆಯಿದೆಯೇ ಎಂದು ಮೊದಲು ಬಹಿರಂಗಪಡಿಸಲಿ ಎಂದು ಕುಟುಕಿದರು.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳ ಜೊತೆ ಪ್ರಾಂಶುಪಾಲ ರಾಮಕೃಷ್ಣ ವರ್ತನೆ ಸರಿಯಿರಲಿಲ್ಲ. ಹೀಗಾಗಿ ಪ್ರಶಸ್ತಿ ತಡೆಹಿಡಿಯಲಾಗಿದೆ, ಆದರೆ ಪ್ರಶಸ್ತಿ ರದ್ದು ಮಾಡಿಲ್ಲ. ಈ ಬಗ್ಗೆ ಮತ್ತೆ ಪರಿಶೀಲನೆ ಮಾಡಿ ವರದಿ ನೀಡುತ್ತಾರೆ ಎಂದು ತಿಳಿಸಿದ್ದರು.



Join Whatsapp