ರಸ್ತೆಯಲ್ಲಿ ನಮಾಜ್ ಮಾಡುವುದು ಸುಮೊಟೋ ಕೇಸ್ ಹಾಕಿಕೊಳ್ಳುವಂತಹ ಗಂಭೀರ ಪ್ರಕರಣವೇ ?

Prasthutha|

ನವೀನ್ ಸೂರಿಂಜೆ

- Advertisement -

ಒಳ ಅಡ್ಡ ರಸ್ತೆಯೊಂದರ ಒಂದು ಭಾಗದಲ್ಲಿ ಮಾತ್ರ ಕೆಲವೇ ಕೆಲವು ಜನ ನಮಾಜ್ ಮಾಡಿದ್ದಾರೆ.
ಮಂಗಳೂರಿನ ರಥಬೀದಿ ವೆಂಕಟರಮಣ ದೇವಸ್ಥಾನದ ರಥೋತ್ಸವ ಪ್ರತೀ ವರ್ಷ ನಡೆಯುತ್ತದೆ. ಇದಕ್ಕಾಗಿ ಒಂದಲ್ಲಾ, ಎರಡಲ್ಲ, ನಾಲ್ಕು ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಮಾರುಕಟ್ಟೆಯಿಂದ ಕುದ್ರೋಳಿ ಸಂಪರ್ಕಿಸುವ ಮುಖ್ಯ ರಸ್ತೆ, ಕೆ ಎಸ್ ರಾವ್ ರಸ್ತೆಯಿಂದ ರಥಬೀದಿ ಸಂಪರ್ಕಿಸುವ ಮುಖ್ಯ ರಸ್ತೆ, ವಾಣಿಜ್ಯ ಬಂದರಿನಿಂದ ರಥಬೀದಿ ಸಂಪರ್ಕಿಸುವ ರಸ್ತೆ, ಕುದ್ರೋಳಿಯಿಂದ ಸ್ಟೇಟ್ ಬ್ಯಾಂಕ್ ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಲಾಗುತ್ತದೆ. ಈ ರಸ್ತೆಯೆಲ್ಲವೂ ಮಂಗಳೂರಿನ ಹೃದಯ ಭಾಗವನ್ನು ತಲುಪುವಂತದ್ದು !


ಕಟೀಲು ದುರ್ಗಾಪರಮೇಶ್ವರಿ ಜಾತ್ರೆ ಸಂದರ್ಭದಲ್ಲಿ ವಾರಗಟ್ಟಲೆ ರಾಜ್ಯ ಹೆದ್ದಾರಿಗೆ ಬ್ಯಾರಿಕೇಟ್ ಹಾಕಿ ರಸ್ತೆಯನ್ನು ಡೈವರ್ಟ್ ಮಾಡಲಾಗುತ್ತದೆ. ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಎದುರಿನ ಚತುಷ್ಪದ ರಾಷ್ಟ್ರೀಯ ಹೆದ್ದಾರಿಯನ್ನು ಏಕಪಥ ಮಾಡಲಾಗುತ್ತದೆ.

- Advertisement -


ಹೀಗೆ ಪ್ರತೀ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಎದುರಿನ ರಸ್ತೆ ಅಡ್ಡರಸ್ತೆಯಾಗಿರಲಿ, ರಾಜ್ಯ ಹೆದ್ದಾರಿಯೇ ಆಗಿರಲಿ, ರಾಷ್ಟ್ರೀಯ ಹೆದ್ದಾರಿಯೇ ಆಗಿರಲಿ. ಅದನ್ನು ಮುಲಾಜಿಲ್ಲದೇ ಪೊಲೀಸ್ ಬ್ಯಾರಿಕೇಟ್ ಎಳೆದು ಬಂದ್ ಮಾಡಲಾಗುತ್ತದೆ.
ನವರಾತ್ರಿಯ ದಿನಗಳಲ್ಲಂತೂ ದೇವಸ್ಥಾನದ ಎದುರಿನ ರಸ್ತೆಯನ್ನು ಒಂಬತ್ತು ದಿನ ಬಂದ್ ಮಾಡುವ ಉದಾಹರಣೆಗಳೂ ಇವೆ. ಅ್ಯಂಬುಲೆನ್ಸ್ ಗಳೂ ಸೇರಿದಂತೆ ತುರ್ತು ವಾಹನಗಳು ವಾರಗಟ್ಟಲೆ ದೂರದ ಬದಲಿ ಮಾರ್ಗವನ್ನೇ ಅನುಸರಿಸಬೇಕು.


ಹೀಗಿರುವಾಗ ಒಂದು ಗಳಿಗೆ ರಸ್ತೆಯಲ್ಲಿ ಮೌನವಾಗಿ ನಮಾಜ್ ಮಾಡಿದ್ರು ಅಂತ ಸುಮೋಟೋ ಕೇಸ್ ದಾಖಲಿಸಿ ಅದನ್ನು ವಿಚಾರಣೆ ಮಾಡುತ್ತಾರೆ ಎಂದರೆ ಇದು ಸಮುದಾಯವೊಂದರ ದ್ವೇಷದ ಮನಸ್ಥಿತಿ ಬಿಟ್ಟರೆ ಇನ್ನೇನೂ ಅಲ್ಲ.

Join Whatsapp