ಪಬ್ ಗೆ ನುಗ್ಗಲು ಬಜರಂಗ ದಳಕ್ಕೆ ಮಾತ್ರವಾ, ಬೇರೆ ರಾಜಕೀಯ ಕಾರ್ಯಕರ್ತರಿಗೂ ಅವಕಾಶ ಇದೆಯೆ?: ಮುನೀರ್ ಕಾಟಿಪಳ್ಳ

Prasthutha|

ಮಂಗಳೂರು: ಪಬ್ ಮೇಲೆ ಬಜರಂಗ ದಳದ ದಾಳಿ ಕುರಿತು ಪೊಲೀಸ್ ಕಮಿಷನರ್ ತುಂಬಾ ಮೃದುವಾಗಿ ಪ್ರತಿಕ್ರಿಯಿಸಿದ್ದಾರೆ. ಲೈಸನ್ಸ್ ಹೊಂದಿರುವ ಯಾವುದೇ ರೆಸ್ಟೋರೆಂಟ್, ಪಬ್ ಗಳಿಗೆ ತೆರಳಿ ಅಲ್ಲಿನ ಗ್ರಾಹಕರನ್ನು ಹೊರಗೆ ಕರೆಸುವ, ಪರಿಶೀಲನೆ ನಡೆಸುವ ಅಧಿಕಾರ ಸಂಘಟನೆಗಳಿಗೆ ಕೊಟ್ಟವರು ಯಾರು ? ಈ ಅಧಿಕಾರ ಬಜರಂಗ ದಳಕ್ಕೆ ಮಾತ್ರವಾ, ಅಥವಾ ಬೇರೆ ರಾಜಕೀಯ ಕಾರ್ಯಕರ್ತರಿಗೂ ಈ ಅವಕಾಶ ಇದೆಯೆ ? ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

- Advertisement -

ಬೇರೆ ಸಂಘಟನೆಗಳು ಇದೇ ರೀತಿ ನಡೆದು ಕೊಂಡರೆ ಕಮಿಷನರ್ ಪ್ರತಿಕ್ರಿಯೆ ಹೀಗೆಯೆ ಇರುತ್ತದೆಯೇ ? ಬೀದಿಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಮಾಧ್ಯಮಗಳ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಜರಂಗ ದಳದ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಲೇಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಮಂಗಳೂರಿನ ವೀರಾಧಿ ವೀರ ಶಾಸಕರು ಈ ಕುರಿತು ಏನಾೆದರು ಪ್ರತಿಕ್ರಿಯಿಸಿದರಾ ? ಬಜರಂಗ ದಳದ ನಿಲುವು ಸರಿ ಎಂದಾದರೆ ಮಂಗಳೂರಿನ ಎಲ್ಲಾ ಪಬ್ ಗಳನ್ನು ಬಾಗಿಲು ಮುಚ್ಚಿಸಲು ಒಂದು ದೃಢ ತೀರ್ಮಾನವನ್ನು ಬಿಜೆಪಿ ಪಕ್ಷ, ಶಾಸಕರು, ಸಂಸದ ನಳಿನ್ ಕುಮಾರ್ ಕಟೀಲ್ ರು ತೆಗೆದುಕೊಳ್ಳಲಿ ಎಂದು ಮುನೀರ್ ಕಾಟಿಪಳ್ಳ ಸವಾಲು ಹಾಕಿದ್ದಾರೆ.



Join Whatsapp