ಭಾರತದ ಮೊತ್ತ ಮೊದಲ ಮಸೀದಿ ಕೊಡುಙಲ್ಲೂರ್ ಚೇರಮಾನ್ ಮಸೀದಿಯ ಚಿತ್ರವನ್ನು ಹಂಚಿಕೊಂಡ ಇರ್ಫಾನ್ ಪಠಾಣ್

Prasthutha|

ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಕೇರಳದ ಕೊಡುಙಲ್ಲೂರ್ ಚೇರಮಾನ್ ಪೆರುಮಾಲ್ ಮಸೀದಿಯ ಚಿತ್ರವನ್ನು ಹಂಚಿಕೊಂಡಿದ್ದು, “ಇದು ಭಾರತದ ಮೊತ್ತ ಮೊದಲ ಮಸೀದಿ, ನಾನು ಎಲ್ಲಿ ನಿಂತಿದ್ದೇನೆಂದು ಹೇಳಬಲ್ಲಿರಾ? ಎಲ್ಲರಿಗೂ ಶುಕ್ರವಾರದ ಶುಭ ಹಾರೈಸುತ್ತೇನೆ” ಎಂದು ಬರೆದಿದ್ದಾರೆ.

- Advertisement -

ಇರ್ಫಾನ್ ಪಠಾಣ್ ಅವರು 2018 ರಲ್ಲಿ ಕೇರಳಕ್ಕೆ ಬಂದಾಗ ವಿಶೇಷ ಆಸಕ್ತಿ ವಹಿಸಿ ಕೊಡುಙಲ್ಲೂರು ಚೇರಮಾನ್ ಪೆರುಮಾಲ್ ಮಸೀದಿಗೆ ಭೇಟಿ ನೀಡಿದ್ದರು.
“ಬಹಳ ಹಿಂದೆಯೇ ಮಸೀದಿಯ ಬಗ್ಗೆ ಕೇಳಿದ್ದೇನೆ. ತಂದೆಯವರು ಸಹೋದರ ಯೂಸುಫ್ ಪಠಾಣ್ ಮತ್ತು ನನಗೆ ಭಾರತದ ಮೊತ್ತ ಮೊದಲ ಮಸೀದಿಯ ಬಗ್ಗೆ ಕಲಿಸಿದ್ದರು” ಎಂದು ಮಸೀದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇರ್ಫಾನ್ ಹೇಳಿದ್ದರು.

- Advertisement -

ತನ್ನ ಕುಟುಂಬದೊಂದಿಗೆ ಮತ್ತೊಮ್ಮೆ ಮಸೀದಿಗೆ ಭೇಟಿ ನೀಡುವುದಾಗಿ ಇರ್ಫಾನ್ ಆ ಸಮಯದಲ್ಲಿ ಹೇಳಿದ್ದರು. ಈ ಮಸೀದಿಯನ್ನು ಕ್ರಿ.ಶ 629 ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.



Join Whatsapp