ಹೊಸದಿಲ್ಲಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರು ಇರಾನ್ನ ತಬ್ರೀಝ್ ನಗರದಲ್ಲಿ ಆಝರ್ ಬೈಜಾನ್ ನ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಜೊತೆಗೂಡಿ ಖಿಝ್ ಖಲಾಸಿ ಅಣೆಕಟ್ಟನ್ನು ಎರಡೂ ದೇಶಗಳು ಹಂಚಿರುವ ಗಡಿ ಸ್ಥಳದಲ್ಲಿ ಉದ್ಘಾಟಿಸಿ ವಾಪಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ.
ರಕ್ಷಕರು ಹೆಲಿಕಾಪ್ಟರ್ ನ್ನು ಸುಮಾರು 2 ಕಿಲೋಮೀಟರ್ (1.25 ಮೈಲುಗಳು) ದೂರದಿಂದ ನೋಡಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಯ ಮುಖ್ಯಸ್ಥ ಪಿರ್ ಹೊಸೈನ್ ಕೊಲಿವಾಂಡ್ ಸರ್ಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇಬ್ರಾಹಿಂ ರಯೀಸಿ ಮತ್ತು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ನೇತೃತ್ವದಲ್ಲಿ ಇರಾನ್ ಕಳೆದ ತಿಂಗಳು ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿತ್ತು. ಯುರೇನಿಯಂನ್ನು ಶಸ್ತ್ರಾಸ್ತ್ರ-ದರ್ಜೆಯ ಮಟ್ಟಕ್ಕೆ ಎಂದಿಗಿಂತಲೂ ಹತ್ತಿರದಲ್ಲಿ ಉತ್ಕ್ರೃಷ್ಠಗೊಳಿಸಿತ್ತು.