ಇಸ್ರೇಲ್ ನಿಂದ ಪ್ರತಿಕಾರದ ಪ್ರತಿಜ್ಞೆ: ‘ವಿನಾಶʼ ಗ್ಯಾರಂಟಿ ಎಂದ ಇರಾನ್

Prasthutha|

ಟೆಹ್ರಾನ್: ಇಸ್ರೇಲ್ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಕ್ಷಿಪಣಿ ದಾಳಿಗಳಿಗೆ ಪ್ರತಿಕಾರ ನೀಡುವುದಾಗಿ ಹೇಳಿದ ಬೆಂಜಮಿನ್ ನೆತನ್ಯಾಹುಗೆ ಇರಾನ್ ನ ರೆವಲ್ಯೂಷನರಿ ಗಾರ್ಡ್ ವಿನಾಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

- Advertisement -

ಟೆಲ್ ಅವೀವ್ ಬಳಿ ಮೂರು ಇಸ್ರೇಲ್ ಸೇನಾ ನೆಲೆಗಳ ಮೇಲೆ ರಾಕೆಟ್ ದಾಳಿ ನಡೆಸಿದ್ದೇವೆ. 90% ತಮ್ಮ ಉದ್ದೇಶಿತ ಗುರಿಯನ್ನು ನಾವು ತಲುಪಿದ್ದೇವೆ ಎಂದು ಇರಾನ್ ನ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ.

ʼಇರಾನ್ ಇಂದು ರಾತ್ರಿ ದೊಡ್ಡ ತಪ್ಪು ಮಾಡಿದೆ ಮತ್ತು ಇದಕ್ಕೆ ಇರಾನ್ ಸರಿಯಾದ ಬೆಲೆ ತೆರಬೇಕಾಗುತ್ತದೆʼ ಎಂದು ನೆತನ್ಯಾಹು ಎಚ್ಚರಿಸಿದ್ದಾರೆ.

- Advertisement -


ಇದಕ್ಕೆ ಪ್ರತ್ಯುತ್ತರವನ್ನು ನೀಡಿದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ʼಇರಾನ್ ಯುದ್ಧದಾಹಿ ರಾಷ್ಟ್ರವಲ್ಲ, ಆದರೆ ಅದು ಯಾವುದೇ ಬೆದರಿಕೆಗಳನ್ನು ದೃಢವಾಗಿ ವಿರೋಧಿಸುತ್ತದೆʼ ಎಂದು ಇಸ್ರೇಲ್ ಗೆ ಎಚ್ಚರಿಕೆಯನ್ನು ನೀಡಿದ್ದಾರೆ.



Join Whatsapp