5 ಭಾರತೀಯ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿದ ಇರಾನ್

Prasthutha|

ಲಿಸ್ಟನ್: ಎಪ್ರಿಲ್ 13ರಂದು ಹಾರ್ಮುಜ್ ಜಲಸಂಧಿಯ ಬಳಿ ವಶಕ್ಕೆ ಪಡೆದಿದ್ದ ಪೋರ್ಚುಗೀಸ್ ಧ್ವಜ ಹೊಂದಿದ್ದ ಹಡಗಿನಲ್ಲಿದ್ದ 25 ಜನರಲ್ಲಿ 7 ಜನರನ್ನು ಇರಾನ್ ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡವರಲ್ಲಿ ಬಿಡುಗಡೆಗೊಂಡವರಲ್ಲಿ ಐವರು ಭಾರತೀಯರು, ಓರ್ವ ಫಿಲಿಪ್ಪೀನ್ಸ್ ಹಾಗೂ ಓರ್ವ ಎಸ್ಟೋನಿಯಾ ಪ್ರಜೆಗಳು ಸೇರಿದ್ದಾರೆ ಎಂದು ಪೋರ್ಚುಗಲ್‍ನ ವಿದೇಶಾಂಗ ಇಲಾಖೆ ತಿಳಿಸಿದೆ.

- Advertisement -

ಪೋರ್ಚುಗೀಸ್ ಧ್ವಜ ಹೊಂದಿರುವ ಎಂಎಸ್‍ಸಿ ಏರೀಸ್ ಹಡಗನ್ನು ಎಪ್ರಿಲ್ 13ರಂದು ಇರಾನ್‍ನ ರೆವೊಲ್ಯುಷನರಿ ಗಾರ್ಡ್ಸ್ ವಶಕ್ಕೆ ಪಡೆದಿತ್ತು. ಅದರಲ್ಲಿ 25 ಸಿಬ್ಬಂದಿ ಇದ್ದರು.

ಹಡಗಿನ ಎಲ್ಲಾ ಸಿಬ್ಬಂದಿಯನ್ನು ಕೂಡ ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಜಫ್ತಿ ಮಾಡಿರುವ ಹಡಗನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಕಳೆದ ವಾರ ಹೇಳಿದ್ದರು.



Join Whatsapp