ಇರಾನ್’ನಿಂದ ಕ್ಷಿಪಣಿ ದಾಳಿ: ವಿಮಾನ ಸಂಚಾರಕ್ಕೆ ತೊಡಕು

Prasthutha|

ಹೊಸದಿಲ್ಲಿ: ಇಸ್ರೇಲ್ ಮೇಲೆ ಮಂಗಳವಾರ ರಾತ್ರಿ ಇರಾನ್ ಕ್ಷಿಪಣಿ ದಾಳಿ ಆರಂಭಿಸಿದ ಬೆನ್ನಲ್ಲೇ ಮಧ್ಯಪ್ರಾಚ್ಯ ಸಂಘರ್ಷ ಉಲ್ಬಣಿಸಿದ್ದು, ಈ ಭಾಗದ ವಾಯುಪ್ರದೇಶಗಳಲ್ಲಿ ಹಾರಾಡುವ ವಿಮಾನಗಳ ಸುರಕ್ಷತೆ ಬಗ್ಗೆ ಆತಂಕ ಮೂಡಿದೆ.

- Advertisement -


ಫ್ರಾಂಕ್ ಫರ್ಟ್ ನಿಂದ ಹೈದರಾಬಾದ್ ಮತ್ತು ಮುಂಬೈಗೆ ಹೊರಟಿದ್ದ ಲುಫ್ತಾನ್ಸಾ ವಿಮಾನಗಳು ಜರ್ಮನಿಗೆ ಮರಳಿದ್ದು, ಸುರಕ್ಷತೆ ಕಾರಣದಿಂದ ಯುದ್ಧಪ್ರದೇಶದಲ್ಲಿ ಹಾರಾಟ ನಡೆಸದಿರಲು ನಿರ್ಧರಿಸಲಾಗಿದೆ.
ಇರಾನ್ ದೇಶ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದಾಗ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಫ್ರಾಂಕ್ ಫರ್ಟ್ – ಹೈದ್ರಾಬಾದ್ ಎಲ್ ಎಚ್752 ಮತ್ತು ಫ್ರಾಂಕ್ ಫರ್ಟ್-ಮುಂಬೈ ಎಲ್ ಎಚ್ 756 ವಿಮಾನಗಳು ಟರ್ಕಿ ವಾಯುಪ್ರದೇಶದಲ್ಲಿದ್ದವು. ವಿಮಾನಗಳು ಫ್ರಾಂಕ್ ಫರ್ಟ್ ಗೆ ಮರಳಿವೆ. ಈ ಹಿನ್ನೆಲೆಯಲ್ಲಿ ಹೈದ್ರಾಬಾದ್ ಮತ್ತು ಮುಂಬೈನಿಂದ ಫ್ರಾಂಕ್ಫರ್ಟ್ ಗೆ ಬುಧವಾರ ಮುಂಜಾನೆ ಹೊರಡಬೇಕಾದ ವಿಮಾನಗಳ ಸೇವೆ ರದ್ದುಪಡಿಸಲಾಗಿದೆ.


ಸ್ವಿಡ್ಜರ್ಲೆಂಡ್ ಕೂಡಾ ಇರಾನ್, ಇರಾಕ್ ಮತ್ತು ಜೋರ್ಡಾನ್ ಪ್ರದೇಶದಲ್ಲಿ ಸಂಚಾರ ನಡೆಸದಿರಲು ನಿರ್ಧರಿಸಿದೆ. ಇದರಿಂದಾಗಿ ದುಬೈ, ಭಾರತ ಮತ್ತು ಆಗ್ನೇಯ ಏಷ್ಯಾ ಸೇವೆಗಳಲ್ಲಿ 15 ನಿಮಿಷ ವಿಳಂಬವಗಲಿದೆ.



Join Whatsapp