ಮುಂಬೈ ಡ್ರಗ್ಸ್ ಪ್ರಕರಣ: ಸಮೀರ್ ಬದಲಿಗೆ ಎನ್.ಸಿ.ಬಿ ತಂಡವನ್ನು ಮುನ್ನಡೆಸಲಿರುವ ಸಂಜಯ್ ಸಿಂಗ್

Prasthutha|

ಮುಂಬೈ: ಡ್ರಗ್ಸ್ ಪ್ರಕರಣವನ್ನು ಭೇದಿಸಿ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದ ಎನ್.ಸಿ.ಬಿ ತಂಡದ ಮುಖ್ಯಸ್ಥರಾಗಿದ್ದ ಸಮೀರ್ ವಾಂಖೆಡ್ ಅವರನ್ನು ತನಿಖಾ ತಂಡದಿಂದ ತೆರವುಗೊಳಿಸಿದ್ದ ಬೆನ್ನಲ್ಲೇ, ಆ ಸ್ಥಾನಕ್ಕೆ ಐ.ಪಿ.ಎಸ್ ಅಧಿಕಾರಿ ಸಂಜಯ್ ಸಿಂಗ್ ಅವರನ್ನು ನೇಮಿಸಲಾಗಿದೆ.

- Advertisement -

1996 ರ ಬ್ಯಾಚ್ ನ ಒಡಿಶಾ – ಕೇಡರ್ ಐ.ಪಿ.ಸಿ ಅಧಿಕಾರಿಯಾಗಿರುವ ಸಂಜಯ್ ಸಿಂಗ್ ಅವರಿಗೆ ಆರ್ಯನ್ ಖಾನ್ ತನಿಖೆಯ ಜೊತೆಗೆ ಇತರ ಮಾದಕದ್ರವ್ಯ ಪ್ರಕರಣಗಳ ಮೇಲ್ವಿಚಾರಣೆಯನ್ನು ವಹಿಸಲಾಗಿದೆ ಎಂದು ಹೇಳಲಾಗಿದೆ.

ಸಂಜಯ್ ಸಿಂಗ್ ಅವರನ್ನು ಪ್ರಸ್ತುತ ನಾರ್ಕೋಟಿಕ್ಸ್ ಬ್ಯೂರೋದ ಡಿಜಿಪಿ ಆಗಿ ನೇಮಕಗೊಳಿಸಲಾಗಿದೆ.

Join Whatsapp