ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಪೊಲೀಸ್ ಮಹಾನಿರ್ದೇಶಕ ಡಾ. ಪಿ.ರವೀಂದ್ರನಾಥ್

Prasthutha|

ಬೆಂಗಳೂರು: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ ಇ)ಯಿಂದ ರಾಜ್ಯ ಪೊಲೀಸ್ ತರಬೇತಿ ವಿಭಾಗಕ್ಕೆ ವರ್ಗಾವಣೆ ಮಾಡಿದ ಬೆನ್ನಲ್ಲೇ ಪೊಲೀಸ್ ಮಹಾ‌ನಿರ್ದೇಶಕ ( ಡಿಜಿಪಿ) ಡಾ.ಪಿ.ರವೀಂದ್ರನಾಥ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

- Advertisement -

ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಡಿಜಿಪಿ ಡಾ.ಪಿ.ರವೀಂದ್ರನಾಥ್ ಅವರು ತಮ್ಮರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ ಇ) ಡಿಜಿಪಿ ಆಗಿದ್ದ ರವೀಂದ್ರನಾಥ್ ಅವರನ್ನು ಇತ್ತೀಚೆಗಷ್ಟೇ ಪೊಲೀಸ್ ತರಬೇತಿ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಮಗಳ ಮದುವೆ ಕಾರ್ಯಕ್ರಮ ನಿಮಿತ್ತ ಕೆಲದಿನ ರಜೆ ಪಡೆದಿದ್ದ ರವೀಂದ್ರನಾಥ್, ನಿನ್ನೆಯಷ್ಟೇ  ಅಧಿಕಾರ ವಹಿಸಿಕೊಂಡಿದ್ದರು.

- Advertisement -

ಅರಮನೆ ರಸ್ತೆಯಲ್ಲಿರುವ ಪೊಲೀಸ್ ತರಬೇತಿ ವಿಭಾಗದ ಕಚೇರಿಗೆ ಇಂದು ಬೆಳಿಗ್ಗೆ ಬಂದಿದ್ದ ರವೀಂದ್ರನಾಥ್, ಅಲ್ಲಿಂದ ವಿಧಾನಸೌಧಕ್ಕೆ ಹೋಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ರಾಜೀನಾಮೆ ಪತ್ರ ಸ್ವೀಕರಿಸಿರುವ ಕಾರ್ಯದರ್ಶಿ, ಮುಂದಿನ ಕ್ರಮಕ್ಕಾಗಿ ಪರಿಶೀಲಿಸುತ್ತಿದ್ದಾರೆ.

ಡಿಸಿಆರ್‌ ಇ ಡಿಸಿಪಿ ಯಾಗಿದ್ದ ಡಾ.ಪಿ.ರವೀಂದ್ರನಾಥ್ ಅವರು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಸೇರಿ ಹಲವರಿಗೆ ಜಾತಿ ಪ್ರಮಾಣ ಪತ್ರದ ಸಂಬಂಧ ನೋಟೀಸ್ ಜಾರಿ ಮಾಡಿದ್ದರು.

ಕೆಂಪಯ್ಯ ಜೊತೆಗೆ ಜಾತಿ ಪ್ರಮಾಣದ ಸಂಬಂಧ ತಹಸೀಲ್ದಾರ್ ಪಿಡಿಒ ಸೇರಿ 150 ಕ್ಕೂ ಮಂದಿ ಸರ್ಕಾರಿ ನೌಕರರಿಗೆ ನೋಟೀಸ್  ಜಾರಿ ಮಾಡಿದ್ದಲ್ಲದೇ ಶಾಸಕ ರೇಣುಕಾಚಾರ್ಯ ಅವರ ಪುತ್ರಿಗೂ‌ ನೋಟೀಸ್ ಜಾರಿ‌ ಮುಂದಾಗಿದ್ದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು.

ಇದರಿಂದ ಬೇಸರಗೊಂಡ ಡಾ.ಪಿ.ರವೀಂದ್ರನಾಥ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Join Whatsapp