ದಕ್ಷಿಣ ಆಫ್ರಿಕದಲ್ಲಿ ಮಿನಿ ಐಪಿಎಲ್‌; ಬಿಡ್ಡಿಂಗ್‌ ಗೆದ್ದ ಭಾರತೀಯರು

Prasthutha|

ಇಂಡಿಯನ್‌ ಪ್ರೀಮಿಯರ್‌ ಲೀಗ್‌– ಐಪಿಎಲ್ ಟೂರ್ನಿಯ ಭರ್ಜರಿ ಯಶಸ್ಸಿನಿಂದ ಪ್ರೇರಣೆ ಪಡೆದಿರುವ ದಕ್ಷಿಣ ಆಫ್ರಿಕ ಕ್ರಿಕೆಟ್ ಮಂಡಳಿ, ‘ಸಿಎಸ್‌ಎ ಟಿ20 ಲೀಗ್‌’ ಆರಂಭಿಸಲು ಮುಂದಾಗಿದೆ. ಈಗಾಗಲೇ ತಂಡಗಳ ಬಿಡ್ಡಿಂಗ್‌ ಪ್ರಕ್ರಿಯೆ ಮುಗಿದಿದ್ದು, ಮೂಲಗಳ ಪ್ರಕಾರ ಸಿಎಸ್‌ಎ ಟಿ20 ಲೀಗ್‌ನ ಎಲ್ಲಾ 6 ತಂಡಗಳನ್ನು ಐಪಿಎಲ್‌ ಫ್ರಾಂಚೈಸಿಗಳ ಮಾಲೀಕರೇ ಖರೀದಿಸಿದ್ದಾರೆ. ಹೀಗಾಗಿ ಇದು ಬಹುತೇಕ ‘ಮಿನಿ ಐಪಿಎಲ್’ ಆಗಿರಲಿದೆ. 2023ರ ಜನವರಿಯಲ್ಲಿ ದಕ್ಷಿಣ ಆಫ್ರಿಕದಲ್ಲಿ ಈ ಹೊಸ ಟಿ20 ಲೀಗ್ ಆರಂಭವಾಗಲಿದೆ.

- Advertisement -

ಬುಧವಾರ ಮುಕ್ತಾಯವಾದ ತಂಡಗಳ ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಮುಖೇಶ್ ಅಂಬಾನಿ (ಮುಂಬೈ ಇಂಡಿಯನ್ಸ್), ಎನ್ ಶ್ರೀನಿವಾಸನ್ (ಚೆನ್ನೈ ಸೂಪರ್‌ಕಿಂಗ್ಸ್), ಪಾರ್ಥ್ ಜಿಂದಾಲ್ (ಡೆಲ್ಲಿ ಕ್ಯಾಪಿಟಲ್ಸ್), ಮಾರನ್ ಕುಟುಂಬ (ಸನ್‌ರೈಸರ್ಸ್‌ ಹೈದರಾಬಾದ್), ಸಂಜೀವ್ ಗೋಯೆಂಕಾ (ಲಖನೌ ಸೂಪರ್‌ಜೈಂಟ್ಸ್) ಮತ್ತು ಮನೋಜ್ ಬದಾಲೆ (ರಾಜಸ್ಥಾನ ರಾಯಲ್ಸ್) ಭಾಗವಹಿಸಿದ್ದರು ಎಂದು ಪ್ರಮುಖ ಕ್ರೀಡಾ ಸುದ್ದಿ ಸಂಸ್ಥೆ ಕ್ರಿಕ್‌ ಬಝ್‌ ವರದಿ ಮಾಡಿದೆ.

ದಕ್ಷಿಣ ಆಫ್ರಿಕದ ಮಾಜಿ ನಾಯಕ ಗ್ರೇಮ್ ಸ್ಮಿತ್ ಟಿ20 ಲೀಗ್‌ನ ಮುಖ್ಯಸ್ಥರಾಗಿದ್ದು, ಫ್ರಾಂಚೈಸಿಗಳ ವಿಜೇತರನ್ನು ಜುಲೈ ತಿಂಗಳಾಂತ್ಯದಲ್ಲಿ ಘೋಷಿಸುವ ಸಾಧ್ಯತೆಯಿದೆ. ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದ ಐಪಿಎಲ್‌ ಫ್ರಾಂಚೈಸಿಗಳ ಮಾಲೀಕರಿಗೆ, ‘ಸಿಎಸ್‌ಎ ಟಿ20 ಲೀಗ್‌’ ತಂಡಗಳ ಮಾಲೀಕತ್ವವನ್ನು ದೃಢಪಡಿಸಲಾದೆ. ದಕ್ಷಿಣ ಆಫ್ರಿಕದ ಖಾಸಗಿ ಟಿವಿ ವಾಹಿನಿ ‘ಸೂಪರ್‌ಸ್ಪೋರ್ಟ್‌’ ಜತೆಗೂಡಿ ಸಿಎಸ್‌ ಈ ಟೂರ್ನಿಯನ್ನು ಆಯೋಜಿಸುತ್ತಿದೆ.

- Advertisement -

ಮೂಲಗಳ ಪ್ರಕಾರ ಮುಂಬೈ ಇಂಡಿಯನ್ಸ್-ಕೇಪ್ ಟೌನ್‌,  ಚೆನ್ನೈ ಸೂಪರ್ ಕಿಂಗ್ಸ್- ಜೋಹಾನ್ಸ್‌ಬರ್ಗ್, ಡೆಲ್ಲಿ ಕ್ಯಾಪಿಟಲ್ಸ್‌- ಪ್ರಿಟೋರಿಯಾ ಕ್ಯಾಪಿಟಲ್ಸ್, ಸನ್‌ರೈಸರ್ಸ್‌ ಹೈದರಾಬಾದ್- ಪೋರ್ಟ್ ಎಲಿಜಬೆತ್, ಲಖನೌ ಸೂಪರ್‌ಜೈಂಟ್ಸ್– ಡರ್ಬನ್ ತಂಡಗಳ ಮಾಲೀಕತ್ವ ತಮ್ಮದಾಗಿಸಿಕೊಂಡಿದೆ. ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ, ‘ಸಿಎಸ್‌ಎ ಟಿ20 ಲೀಗ್‌’ ಬಿಡ್ಡಿಂಗ್‌ನಲ್ಲಿ ಗರಿಷ್ಠ ₹250 ಕೋಟಿವರೆಗೂ ಬಿಡ್ ಸಲ್ಲಿಸಿದೆ ಎನ್ನಲಾಗುತ್ತಿದೆ.



Join Whatsapp