ಐಪಿಎಲ್ 2022; ಐಪಿಎಲ್’ಗೆ ಎರಡು ಹೊಸ ತಂಡಗಳ ಸೇರ್ಪಡೆ, ಅದಾನಿ ಔಟ್- ಗೊಯೆಂಕಾ ಇನ್..!

Prasthutha|

ದುಬೈ; ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಎರಡು ಹೊಸ ತಂಡಗಳಿಗಾಗಿ ನಡೆದ ಬಿಡ್ಡಿಂಗ್ ಪ್ರಕಿಯೆಯು ಮುಕ್ತಾಯವಾಗಿದ್ದು, ಅಧಿಕೃತ ಘೋಷಣೆ ಬಾಕಿಯಿದೆ.
ಮೂಲಗಳ ಪ್ರಕಾರ ಸಂಜೀವ ಗೋಯೆಂಕಾ ಹಾಗೂ ಸಿವಿಸಿ ಸಂಸ್ಥೆಯು ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.

- Advertisement -

ಅಹಮದಾಬಾದ್ ಮತ್ತು ಲಕ್ನೋ ಎರಡು ಹೊಸ ತಂಡಗಳಾಗಿ ಐಪಿಎಲ್’ಗೆ ಮುಂದಿನ ಸೀಸನ್’ನಲ್ಲಿ ಎಂಟ್ರಿ ಕೊಡಲಿವೆ.
ಸಿವಿಸಿ ಕ್ಯಾಪಿಟಲ್ ಪಾರ್ಟ್ ನರ್ಸ್ ಅಹಮದಾಬಾದ್ ಪಡೆದರೆ, ಆರ್ ಪಿಎಸ್ ಜಿ ಗ್ರೂಪ್ ಲಕ್ನೋ ಫ್ರಾಂಚೈಸಿ ಪಡೆದಿದೆ.

ಬಿಡ್ ನಲ್ಲಿ ಅಂತಿಮವಾಗಿ ಆರ್​ಪಿ ಸಂಜೀವ್ ಗೊಯೇಂಕಾ ಅವರ ಆರ್​ಪಿಎಸ್​ಜಿ ಗ್ರೂಪ್ 7 ಸಾವಿರ ಕೋಟಿಗೆ ಮೊದಲ ತಂಡವನ್ನು ಖರೀದಿಸಿತು. ಇನ್ನು 2ನೇ ತಂಡವನ್ನು ಸಿವಿಸಿ ಕ್ಯಾಪಿಟಲ್ಸ್ ಪ್ರೈವೇಟ್ ಇಕ್ಯುಟಿ ಕಂಪೆನಿ 5,200 ಕೋಟಿಗೆ ಪಡೆದುಕೊಂಡಿದೆ. ಸಂಜೀವ್ ಗೊಯೇಂಕಾ ಈ ಹಿಂದೆ ರೈಸಿಂಗ್ ಪುಣೆ ಜೈಂಟ್ಸ್​ ತಂಡದ ಮಾಲೀಕರಾಗಿದ್ದರು. ಇದೀಗ ಮತ್ತೊಮ್ಮೆ ಐಪಿಎಲ್​ ತಂಡವನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

- Advertisement -

ಪ್ರಮುಖ ಕ್ರೀಡಾ ಮಾಧ್ಯಮವಾದ ಕ್ರಿಕ್’ಬಝ್ ಈ ಕುರಿತು ಟ್ವಿಟರ್’ನಲ್ಲಿ ಮಾಹಿತಿ ನೀಡಿದೆ.
ಟೈಮ್ಸ್‌ ಆಫ್ ಇಂಡಿಯಾ ಕೂಡ ಇದೇ ಮಾಹಿತಿಯನ್ನು ಹಂಚಿಕೊಂಡಿದ್ದು, ಬಿಸಿಸಿಐ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿರುವುದಾಗಿ ಹೇಳಿದೆ.
ಆದರೆ ಬಿಸಿಸಿಐ ಕಡೆಯಿಂದ ಅಧಿಕೃತವಾದ ಪ್ರಕಟಣೆ ಇನ್ನಷ್ಟೇ ಬರಬೇಕಾಗಿದೆ

Join Whatsapp