ದುಬೈ; ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಎರಡು ಹೊಸ ತಂಡಗಳಿಗಾಗಿ ನಡೆದ ಬಿಡ್ಡಿಂಗ್ ಪ್ರಕಿಯೆಯು ಮುಕ್ತಾಯವಾಗಿದ್ದು, ಅಧಿಕೃತ ಘೋಷಣೆ ಬಾಕಿಯಿದೆ.
ಮೂಲಗಳ ಪ್ರಕಾರ ಸಂಜೀವ ಗೋಯೆಂಕಾ ಹಾಗೂ ಸಿವಿಸಿ ಸಂಸ್ಥೆಯು ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.
ಅಹಮದಾಬಾದ್ ಮತ್ತು ಲಕ್ನೋ ಎರಡು ಹೊಸ ತಂಡಗಳಾಗಿ ಐಪಿಎಲ್’ಗೆ ಮುಂದಿನ ಸೀಸನ್’ನಲ್ಲಿ ಎಂಟ್ರಿ ಕೊಡಲಿವೆ.
ಸಿವಿಸಿ ಕ್ಯಾಪಿಟಲ್ ಪಾರ್ಟ್ ನರ್ಸ್ ಅಹಮದಾಬಾದ್ ಪಡೆದರೆ, ಆರ್ ಪಿಎಸ್ ಜಿ ಗ್ರೂಪ್ ಲಕ್ನೋ ಫ್ರಾಂಚೈಸಿ ಪಡೆದಿದೆ.
ಬಿಡ್ ನಲ್ಲಿ ಅಂತಿಮವಾಗಿ ಆರ್ಪಿ ಸಂಜೀವ್ ಗೊಯೇಂಕಾ ಅವರ ಆರ್ಪಿಎಸ್ಜಿ ಗ್ರೂಪ್ 7 ಸಾವಿರ ಕೋಟಿಗೆ ಮೊದಲ ತಂಡವನ್ನು ಖರೀದಿಸಿತು. ಇನ್ನು 2ನೇ ತಂಡವನ್ನು ಸಿವಿಸಿ ಕ್ಯಾಪಿಟಲ್ಸ್ ಪ್ರೈವೇಟ್ ಇಕ್ಯುಟಿ ಕಂಪೆನಿ 5,200 ಕೋಟಿಗೆ ಪಡೆದುಕೊಂಡಿದೆ. ಸಂಜೀವ್ ಗೊಯೇಂಕಾ ಈ ಹಿಂದೆ ರೈಸಿಂಗ್ ಪುಣೆ ಜೈಂಟ್ಸ್ ತಂಡದ ಮಾಲೀಕರಾಗಿದ್ದರು. ಇದೀಗ ಮತ್ತೊಮ್ಮೆ ಐಪಿಎಲ್ ತಂಡವನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಪ್ರಮುಖ ಕ್ರೀಡಾ ಮಾಧ್ಯಮವಾದ ಕ್ರಿಕ್’ಬಝ್ ಈ ಕುರಿತು ಟ್ವಿಟರ್’ನಲ್ಲಿ ಮಾಹಿತಿ ನೀಡಿದೆ.
ಟೈಮ್ಸ್ ಆಫ್ ಇಂಡಿಯಾ ಕೂಡ ಇದೇ ಮಾಹಿತಿಯನ್ನು ಹಂಚಿಕೊಂಡಿದ್ದು, ಬಿಸಿಸಿಐ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿರುವುದಾಗಿ ಹೇಳಿದೆ.
ಆದರೆ ಬಿಸಿಸಿಐ ಕಡೆಯಿಂದ ಅಧಿಕೃತವಾದ ಪ್ರಕಟಣೆ ಇನ್ನಷ್ಟೇ ಬರಬೇಕಾಗಿದೆ