ಐಪಿಎಲ್ ಬೆಟ್ಟಿಂಗ್ ಪ್ರಕರಣ ; ಖಾತೆದಾರರ ಹಣ ಖತಂ ಮಾಡಿದ ಪೋಸ್ಟ್ ಮ್ಯಾನ್

Prasthutha|

ಭೋಪಾಲ್: ಮಧ್ಯಪ್ರದೇಶದ ಪೋ‌ಸ್ಟ್ ಮ್ಯಾನ್ ಒಬ್ಬ ಐಪಿಎಲ್  ಕ್ರಿಕೆಟ್ ಪಂದ್ಯಗಳ ಬೆಟ್ಟಿಂಗ್ ನಲ್ಲಿ ಒಂದು ಕೋಟಿ ರೂಪಾಯಿಗಳನ್ನು ಕಳೆದುಕೊಂಡ ಘಟನೆ ಸಾಗರ್ ಜಿಲ್ಲೆಯ ಬಿನಾ ಎಂಬಲ್ಲಿ ನಡೆದಿದೆ.

- Advertisement -

ಘಟನೆಗೆ ಸಂಬಂಧಿಸಿ ಆರೋಪಿಯನ್ನು ಬಿನಾ ಸರ್ಕಾರಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಗರ್  ಜಿಲ್ಲೆಯ ಬಿನಾ  ಪ್ರದೇಶದ  ಉಪ ಅಂಚೆಕಚೇರಿಯೊಂದರಲ್ಲಿ 24 ಕುಟುಂಬಗಳು ನಿಶ್ಚಿತ ಠೇವಣಿಯಾಗಿ ಜಮೆ ಮಾಡಿಟ್ಟಿದ್ದ ಮೊತ್ತವನ್ನು,  ಪೋಸ್ಟ್ ಮ್ಯಾನ್ ವಿಶಾಲ್ ಅಹಿನರ್ವಾರ್‌  ಎಂಬಾತ ಬೆಟ್ಟಿಂಗ್ ಗೆ  ಬಳಸಿ  ಕಳೆದುಕೊಂಡಿದ್ದಾನೆ.  ಈತ  ಕಳೆದ ಎರಡು ವರ್ಷಗಳಿಂದ ನಕಲಿ ಎಫ್ ಡಿ  ಖಾತೆಗಳಿಗೆ ಪಾಸ್‍‌ ಪುಸ್ತಕ ನೀಡಿ, ಎಲ್ಲಾ ಮೊತ್ತವನ್ನು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಗೆ    ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

- Advertisement -

“ಆರೋಪಿ ವಿಶಾಲ್‌ ಅಹಿರ್ವಾರ್‌ ನನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಮತ್ತು 408 (ವಿಶ್ವಾಸಘಾತುಕ) ಪ್ರಕರಣಗಳ ಅನ್ವಯ ಬಂಧಿಸಲಾಗಿದ್ದು, ಮುಂದಿನ ತನಿಖೆ ನಡೆಸಿ ಇನ್ನಷ್ಟು ಸೆಕ್ಷನ್ಗ ಳನ್ನು ಸೇರಿಸಲಾಗುವುದು ಎಂದು ಠಾಣಾಧಿಕಾರಿ ಅಜಯ್ ದೂರ್ವೆ ವಿವರಿಸಿದ್ದಾರೆ.



Join Whatsapp