ಐಪಿಎಲ್‌ 2023; ಎಪ್ರಿಲ್‌ನಲ್ಲಿಆರಂಭ, ಮೇ 31ಕ್ಕೆ ಫೈನಲ್‌?

Prasthutha|

ಐಪಿಎಲ್‌ನ 16ನೇ ಆವೃತ್ತಿಯ ದಿನಾಂಕವನ್ನು ಬಿಸಿಸಿಐ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಅದಾಗಿಯೂ 2023ರ ಎಪ್ರಿಲ್‌1ರಂದು ಆರಂಭವಾಗುವ ಚುಟುಕು ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯ ಮೇ 31ರಂದು ನಡೆಯುವ ಸಾಧ್ಯತೆಯಿದೆ.

- Advertisement -

ಮುಂದಿನ ಬಾರಿಯ ಐಪಿಎಲ್‌ ಟೂರ್ನಿಯನ್ನು 74 ದಿನಗಳ ಕಾಲ ನಡೆಸಲು ಭಾರತೀಯ ಕ್ರಿಕೆಟ್‌ ಬೋರ್ಡ್‌, ಬಿಸಿಸಿಐ ಚಿಂತನೆ ನಡೆಸಿತ್ತು. ಬಿಸಿಸಿಐ ಯೋಜನೆಯಂತೆ ಎಪ್ರಿಲ್‌ 1 ರಂದು ಉದ್ಘಾಟನಾ ಪಂದ್ಯ ನಡೆದರೆ ಜೂನ್‌ ಎರಡನೇ ವಾರದಲ್ಲಿ ಫೈನಲ್‌ ನಡೆಯಬೇಕಿತ್ತು. ಆದರೆ ಐಸಿಸಿ ನಿಯಮವು ಬಿಸಿಸಿಐಗೆ ಅಡ್ಡಿಯಾಗಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯವು ಜೂನ್‌ 7ರಂದು ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲಿ ನಿಗದಿಯಾಗಿದೆ. ನಿಯಮಗಳ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಆಯೋಜಿಸುವ ಯಾವುದೇ ಕೂಟದ 7 ದಿನಗಳ ಹಿಂದೆ ಮತ್ತು ಮುಂದಿನ 7 ದಿನಗಳ ಕಾಲ ಯಾವುದೇ ಟೂರ್ನಿಯನ್ನು ಆಯೋಜಿಸುವಂತಿಲ್ಲ. ಹೀಗಾಗಿ ಮೇ 31 ಅಥವಾ ಅದರ ಒಳಗಾಗಿ ಐಪಿಎಲ್‌ ಅನ್ನು ಮುಗಿಸಲೇಬೇಕಾದ ಒತ್ತಡಕ್ಕೆ ಬಿಸಿಸಿಐ ಸಿಲುಕಿದೆ. ಮಾರ್ಚ್‌ನಲ್ಲಿ ಮಹಿಳಾ ಐಪಿಎಲ್‌ ನಿಗದಿಯಾಗಿರುವುದರಿಂದ 60 ಅಥವಾ 57 ದಿನಗಳ ಒಳಗಾಗಿ 16ನೇ ಆವೃತ್ತಿಯನ್ನು ಮುಗಿಸಲೇಬೇಕಾದ ಅನಿವಾರ್ಯತೆ ಬಿಸಿಸಿಐಗೆ ಎದುರಾಗಿದೆ. ಇದರೊಂದಿಗೆ ವಿದೇಶಿ ಆಟಗಾರರ ಲಭ್ಯತೆ ಮತ್ತು ಅಧಿಕೃತ ಪಸಾರಕರ ಸಮಯವನ್ನೂ ಬಿಸಿಸಿಐ ಪರಿಗಣಿಸಬೇಕಾಗಿದೆ.



Join Whatsapp