ಐಪಿಎಲ್ 2022: ಕಪ್ ನಮ್ದಾಗದೇ ಆರ್‌ಸಿಬಿ ಅಭಿಯಾನ ಅಂತ್ಯ !

Prasthutha|

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ ಈ ಬಾರಿಯೂ ಕಪ್ ಇಲ್ಲದೆಯೇ ಅಂತ್ಯವಾಗಿದೆ.
ಅಹಮದಾಬಾದ್ ನಲ್ಲಿ ನಡೆದ ಕ್ಬಾಪಿಫೈಯರ್ -2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಅಂತರದಲ್ಲಿ ಆರ್‌ಸಿಬಿಯನ್ನು ಮಣಿಸಿ ಫೈನಲ್ ಪ್ರವೇಶಿಸಿದೆ.
ಭಾನುವಾರ ಇದೇ ಮೈದಾನದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
ಬೆಂಗಳೂರು ತಂಡ ನೀಡಿದ್ದ 158 ರನ್ ಗಳ ಗುರಿಯನ್ನು 18.1 ಓವರ್‌ಗಳಲ್ಲಿ ನಿರಾಯಾಸವಾಗಿ ತಲುಪಿದ ರಾಯಲ್ಸ್, ಆರ್‌ಸಿಬಿ ತಂಡವನ್ನು ಟೂರ್ನಿಯಿಂದ ಹೊರದಬ್ಬಿತು.
4ನೇ ಶತಕ ಬಾರಿಸಿದ ಬಟ್ಲರ್!
ಪ್ರಸಕತ ಟೂರ್ನಿಯಲ್ಲಿ ಅಮೋಘ ಫಾರ್ಮ್ ನಲ್ಲಿರುವ ಜಾಸ್ ಬಟ್ಲರ್ ನಿರ್ಣಾಯಕ ಪಂದ್ಯದಲ್ಲೂ ಭರ್ಜರಿ ಶತಕ ಗಳಿಸಿದರು.
60 ಎಸೆತಗಳನ್ನು ಎದುರಿಸಿದ ಜಾಸ್, 6 ಭರ್ಜರಿ ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 106 ರನ್ ಗಳಿಸಿ ಅಜೇಯರಾಗುಳಿದರು.
ಯಶಸ್ವೀ ಜೈಸ್ವಾಲ್ 21 ರನ್ ಮತ್ತು ನಾಯಕ ಸಂಜು ಸ್ಯಾಮ್ಸನ್ 23 ರನ್ ಗಳಿಸಿ ನಿರ್ಗಮಿಸಿದರು.
2008ರ ಚೊಚ್ಚಲ ಐಪಿಎಲ್’ನಲ್ಲಿ ಪ್ರಶಸ್ತಿ ಜಯಿಸಿದ್ದ ರಾಜಸ್ಥಾನ ರಾಯಲ್ಸ್, ಆ ಬಳಿಕ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.



Join Whatsapp