ಐಪಿಎಲ್’ನ 15ನೇ ಆವೃತ್ತಿಯ ‘ರಾಯಲ್ಸ್’ ಹಣಾಹಣಿಯಲ್ಲಿ ರಾಜಸ್ಥಾನ ಗೆಲುವಿಗೆ ಆರ್‌ಸಿಬಿ 158 ರನ್’ಗಳ ಸಾಮಾನ್ಯ ಗೆಲುವಿನ ಗುರಿ ನೀಡಿದೆ.
ಅಹಮದಾಬಾದ್ ನಲ್ಲಿ ನಡೆಯುತ್ತಿರುವ ‘ಕ್ವಾಲಿಫೈಯರ್-2’ ಪಂದ್ಯದಲ್ಲಿ ಆರ್’ಸಿಬಿ ಪರ ರಾಹುಲ್ ಪಾಟೀದಾರ್ ಹೊರತು ಪಡಿಸಿ ಉಳಿದೆಲ್ಲಾ ಬ್ಯಾಟರ್’ಗಳು ಜವಾಬ್ದಾರಿಯುತ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಕಳೆದ ಪಂದ್ಯದಲ್ಲಿ ಅಮೋಘ ಶತಕ ದಾಖಲಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ರಜತ್ ಪಾಟೀದಾರ್, ರಾಜಸ್ಥಾನ ವಿರುದ್ಧ ಆಕರ್ಷಕ ಅರ್ಧಶತಕ ದಾಖಲಿಸಿದರು.
42 ಎಸೆತಗಳನ್ನು ಎದುರಿಸಿದ ರಜತ್, 3 ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿದ್ದ ವೇಳೆ ಅಶ್ವಿನ್ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.
ಬೆಂಗಳೂರು ತಂಡದ ಆರಂಭಿಕ ಜೋಡಿ ನಿರ್ಣಾಯಕ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಕೊಹ್ಲಿ 7 ರನ್ ಮತ್ತು ನಾಯಕ ಡುಪ್ಲೆಸಿಸ್ 25 ರನ್ ಗಳಿಸಿ ನಿರ್ಗಮಿಸಿದರು.ಮ್ಯಾಕ್ಸ’ವೆಲ್ 24, ಲೊಮ್ರೋರ್ 8, ಹಾಗೂ ಟೂರ್ನಿಯಲ್ಲಿ ಆರ್‌ಸಿಬಿ ಪಾಲಿನ ‘ಫಿನಿಶರ್’ ಆಗಿರುವ ದಿನೇಶ್ ಕಾರ್ತಿಕ್ ಕೇವಲ 6 ರನ್ ಗಳಿಸುಷ್ಟರಲ್ಲೇ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನಡೆಯಾಯಿತು.
ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 157ರನ್ ಗಳಿಸಲಷ್ಟೇ ಡುಪ್ಲೆಸಿಸ್ ಪಡೆಗೆ ಸಾಧ್ಯವಾಯಿತು. ಶಹಬಾಝ್ ಅಹ್ಮದ್ 12 ರನ್ ಗಳಿಸಿ ಅಜೇಯರಾಗುಳಿದರು.
ರಾಜಸ್ಥಾನ ರಾಯಲ್ಸ್ ಪರ ಪ್ರಸಿದ್ಧ್ ಕೃಷ್ಣ ಮತ್ತು ಮೆಕಾಯ್ ತಲಾ 3 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ಆರ್. ಅಶ್ವಿನ್ ತಲಾ 1 ವಿಕೆಟ್ ಪಡೆದರು.
ಐಪಿಎಲ್ 2022: ರಾಜಸ್ಥಾನ ಗೆಲುವಿಗೆ 158 ರನ್ ಗುರಿ
Prasthutha|