ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ರೂಡಿ ಕೊಯೆರ್ಟ್ಜೆನ್ ನಿನ್ನೆ ಸಂಜೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಕ್ರಿಕೆಟ್ ತೀರ್ಪಿನ ವೇಳೆ ಬೆರಳುಗಳನ್ನು ನಿಧಾನವಾಗಿ ಮೇಲಕ್ಕೆತ್ತುವುದರಲ್ಲಿ ಅವರು ಹೆಸರುವಾಸಿಯಾಗಿದ್ದರು.
ನೆಲ್ಸನ್ ಮಂಡೇಲಾ ಕೊಲ್ಲಿಯಲ್ಲಿ ಗಾಲ್ಫ್ ಆಡಿಕೊಂಡು ಕೊರ್ಟ್ಜೆನ್ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೊಯೆರ್ಟ್ಜೆನ್ ಮತ್ತು ಇತರ ಮೂವರು ಸಹ ಪ್ರಯಾಣಿಕರು ಇದ್ದ ಕಾರು ಡಿಕ್ಕಿ ಹೊಡೆದಿದ್ದರಿಂದ ಅವರಿಗೆ ತಲೆಗೆ ಪೆಟ್ಟಾಗಿ, ನಿಧನರಾದರು ಎಂದು ಅವರ ಮಗ ರೂಡಿ ಕೊಯೆರ್ಟ್ಜೆನ್ ಜೂನಿಯರ್ ತಿಳಿಸಿದರು.
1981 ರಲ್ಲಿ ಮೊದಲ ಅಂಪೈರಿಂಗ್ ಮಾಡಿದ್ದ ಕೊಯೆರ್ಟ್ಜೆನ್ 1992 ರಲ್ಲಿ ಪೋರ್ಟ್ ಎಲಿಜಬೆತ್ ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅಂಪೈರಿಂಗ್ ಮಾಡಿದ್ದರು. 331 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದು, ದಂತಕಥೆ ಡೇವಿಡ್ ಶೆಫರ್ಡ್ ನಂತರ 150 ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಅಂಪೈರ್ ಮಾಡಿದ ಇತಿಹಾಸದಲ್ಲಿ ಎರಡನೇ ಅಂಪೈರ್ ಮತ್ತು ಸ್ಟೀವ್ ಬಕ್ನರ್ ನಂತರ 200 ಟೆಸ್ಟ್ ಪಂದ್ಯಗಳಲ್ಲಿ ನಿಂತ ಎರಡನೇ ಅಂಪೈರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ರೂಡಿ ಕೊಯೆರ್ಟ್ಜೆನ್ 2022 ರಲ್ಲಿ ಐಸಿಸಿ ಎಲೈಟ್ ಪ್ಯಾನಲ್ ಆಫ್ ಅಂಪೈರ್ಸ್ನ ಮೂಲ ಸದಸ್ಯರಲ್ಲಿ ಒಬ್ಬರಾಗಿದ್ದರು