ಮಂಡ್ಯ ಮಿಮ್ಸ್ ಸಿಬ್ಬಂದಿಯ ಅಮಾನವೀಯ ವರ್ತನೆ; ಸಾರ್ವಜನಿಕರ ಆಕ್ರೋಶ

Prasthutha|

ಮಂಡ್ಯ : ಆಸ್ಪತ್ರೆಯಲ್ಲಿ ವೀಲ್ ಚೇರ್ ದೊರೆಯದ ಕಾರಣ  ಮಗಳನ್ನು ತಂದೆಯೊಬ್ಬರು  ಕೈಯಲ್ಲೇ ಹೊತ್ತು 1 ಕಿಮೀ ಸಾಗಿದ ಹೃದಯ ವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ.

- Advertisement -

ರಾಮನಗರ ಮೂಲದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೀಡಾದ ತನ್ನ ಮಗಳನ್ನು ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು. ಕಳೆದ ಭಾನುವಾರ ಸ್ಕ್ಯಾನಿಂಗ್ ಮಾಡಿಸುವಂತೆ ವೈದ್ಯರ ಸೂಚನೆ ನೀಡಿದ್ದರು. ಆದರೆ, ಆಸ್ಪತ್ರೆಯಲ್ಲಿನ ಅವ್ಯವಸ್ಥೆಯಿಂದಾಗಿ  ಆಸ್ಪತ್ರೆಯ ಸಿಬ್ಬಂದಿ ಸ್ಕ್ಯಾನಿಂಗನ್ನು ಹೊರಗೆ ಎಲ್ಲಾದರೂ  ಮಾಡಿಸುವಂತೆ ತಿಳಿಸಿದ್ದಾರೆ.

ಆದರೆ ಮಗಳ ಸ್ಕ್ಯಾನಿಂಗ್‌ ಮಾಡಿಸಲು ಆ ವ್ಯಕ್ತಿಗೆ ವೀಲ್ ಚೇರ್ ಆಸ್ಪತ್ರೆಯ ವತಿಯಿಂದ ನೀಡಲಿಲ್ಲ. ಬಡಪಾಯಿ ತಂದೆ 1ಕಿ.ಮೀ ವರೆಗೆ ಮಗಳನ್ನು ಕೈಗಳಲ್ಲೇ ಎತ್ತಿಕೊಂಡು  ನಡೆದಿದ್ದಾರೆ. ಇದೀಗ ಮಿಮ್ಸ್ ಸಿಬ್ಬಂದಿವರ್ಗದ  ಅಮಾನವೀಯ ಮತ್ತು ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.



Join Whatsapp