ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅಳಿಯ ಬ್ರಿಟನ್‌ ಪ್ರಧಾನಮಂತ್ರಿ?

Prasthutha|

ಲಂಡನ್: ಬೊರಿಸ್ ಜಾನ್ಸನ್ ರಾಜಿನಾಮೆಯಿಂದ ತೆರವಾದ ಬ್ರಿಟನ್‌ ಪ್ರಧಾನಮಂತ್ರಿ ಹುದ್ದೆಗೆ ರಿಷಿ ಸುನಕ್ ಸಂಭಾವ್ಯ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಬ್ರಿಟನ್ ಪ್ರಧಾನಿಯಾದರೆ ಬ್ರಿಟಿಷ್ ಪ್ರಧಾನಿಯಾದ ಭಾರತೀಯ ಮೂಲದ ಮೊದಲ ವ್ಯಕ್ತಿಯಾಗಲಿದ್ದಾರೆ.

- Advertisement -

ರಿಷಿ ಸುನಕ್ ಅವರನ್ನು ಖಜಾನೆಯ ಚಾನ್ಸೆಲರ್ ಆಗಿ ಬೋರಿಸ್ ಜಾನ್ಸನ್ ಅವರು ಫೆಬ್ರವರಿ 2020 ರಲ್ಲಿ ನೇಮಿಸಿದ್ದರು. ಕೋವಿಡ್ ಸಮಯದಲ್ಲಿ ವರ್ತಕರಿಗೆ ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಹಲವು  ಶತಕೋಟಿ ಪೌಂಡ್‌ಗಳ ಬೃಹತ್ ಪ್ಯಾಕೇಜ್ ಅನ್ನು ಅವರು ರೂಪಿಸಿದ ನಂತರ ಹೆಚ್ಚು ಜನಪ್ರಿಯರಾದರು.

ರಿಷಿ ಸುನಕ್ ಅವರ ಅಜ್ಜಿ ಭಾರತೀಯ ಮೂಲದವರಾಗಿದ್ದು, ಪಂಜಾಬ್‌ನಿಂದ ಬ್ರಿಟನ್‌ನಲ್ಲಿ ಹೋಗಿ ನೆಲೆಸಿದ್ದರು. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿಯನ್ನು ವರಿಸಿರುವ  ರಿಷಿ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.

Join Whatsapp