ಕೀವ್: ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿ ಹಾಕಿರುವ ಕರ್ನಾಟಕ ಮೂಲದವರ ಮಾಹಿತಿ ಲಭ್ಯವಾಗಿದೆ. ಕಂಟ್ರೋಲ್ ರೂಮ್ ಮೂಲಕ ರಾಜ್ಯದಿಂದ ಉಕ್ರೇನ್ ಗೆ ವಿದ್ಯಾಬ್ಯಾಸಕ್ಕೆ ತೆರಳಿದ್ದ ಎಲ್ಲಾ ವಿದ್ಯಾರ್ಥಿಗಳ ಜಿಲ್ಲಾವಾರು ಮಾಹಿತಿಯನ್ನು ಕಲೆ ಹಾಕಲಾಗಿದೆ. ಕಂಟ್ರೋಲ್ ರೂಮ್ ಮಾಹಿತಿಯನ್ವಯ ರಾಜ್ಯದ 59 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಎಮ್.ಬಿ.ಪಿ.ಎಸ್ ಕಲಿಯುತ್ತಿದ್ದಾರೆ.
ಸದ್ಯ ಉಕ್ರೇನ್ ನಲ್ಲಿ ಸಿಲುಕಿದವರ ಜಿಲ್ಲಾವಾರು ಅಂಕಿಅಂಶಗಳು !
1) ಬಾಗಲಕೋಟೆ -2, 2) ಬೆಂಗಳೂರು -25, 3) ವಿಜಯಪುರ -2, 4) ಚಿಕ್ಕಬಳ್ಳಾಪುರ -1, 5) ಚಿಕ್ಕಮಗಳೂರು -4, 6) ಚಿತ್ರದುಗ -1,
7) ದಕ್ಷಿಣ ಕನ್ನಡ -1, 8) ದಾವಣಗೆರೆ -1, 9) ಧಾರವಾಡ -1, 10) ಹಾಸನ -2, 11) ಹಾವೇರಿ -2, 12) ಕಲಬುರಗಿ -1, 13)ಕೊಡಗು -೨
14) ಕೋಲಾರ -1, 15) ಮಂಡ್ಯ -1, 16) ಮಂಗಳೂರು -1, 17) ಮೈಸೂರು -2, 18) ಶಿವಮೊಗ್ಗ -1, 19) ಬಳ್ಳಾರಿ -5
20) ರಾಯಚೂರು -3 ಸೇರಿದಂತೆ ಒಟ್ಟು 59 ಮಂದಿ ವಿದಾರ್ಥಿಗಳು ಉಕ್ರೇನ್ ನಲ್ಲಿದ್ದಾರೆ.
ಘಟನೆಯ ಬೆನ್ನಲ್ಲೆ ಎಚ್ಚೆತ್ತುಕೊಂಡ ಭಾರತ ಈಗಾಗಲೇ ರಕ್ಷಣಾ ತಂಡಗಳನ್ನ ಉಕ್ರೇನ್ ಗಡಿ ಭಾಗಗಳಲ್ಲಿ ಮೊಕ್ಕಂ ಹೂಡುವಂತೆ ಸೂಚಿಸಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಎಂಇಎ(MEA) ರಕ್ಷಣಾ ತಂಡಗಳು ಗಡಿ ಭಾಗದಲ್ಲಿ ಉಕ್ರೇನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಕಾರ್ಯಪ್ರವೃತ್ತವಾಗಿವೆ. ಹಂಗೇರಿ, ಪೋಲೆಂಡ್, ಸ್ಲೋವಾಕ್ ರಿಪಬ್ಲಿಕ್ ಮತ್ತು ರೊಮೇನಿಯಾದ ಭೂ ಗಡಿಗಳಲ್ಲಿ ಎಂಇಎ(MEA) ತಂಡಗಳು ಕರ್ನಾಟಕ ಮೂಲದ ವಿದ್ಯಾರ್ಥಿಗಳಿಗೆ ಸಹಾಯ ಹಸ್ತಕ್ಕೆ ಸಿದ್ದವಾಗಿವೆ ಎಂದು ಹೇಳಲಾಗಿದೆ.
ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರು ಎಂಇಎ(MEA) ತಂಡಗಳನ್ನ ಸಂಪರ್ಕ ಮಾಡಬಹುದು. ಜೊತೆಗೆ ತಮ್ಮ ಮಕ್ಕಳ ಬಗ್ಗೆ ಎಲ್ಲಾ ಮಾಹಿತಿ ಪಡೆಯಲು ಪೊಷಕರು ಈ ಕೆಳಗಿನ ನಂಬರ್ ಗಳನ್ನು ಸಂಪರ್ಕ ಮಾಡಬಹುದು ಎಂದು ತಿಳಿಸಿದೆ.
ಉಕ್ರೇನ್ ವಿವಿಧ ಗಡಿ ಬಾಗದಲ್ಲಿರುವ ಭಾರತೀಯ ಎಂಇಎ(MEA) ತಂಡಗಳ ವಿವರಗಳು ಮತ್ತು ದೂರುವಾಣಿ ಸಂಖ್ಯೆ ಈ ಕೆಳಗಿನಂತಿವೆ.
ಹಂಗೇರಿಯಾದ ಝಹೋನಿ ಬಾರ್ಡರ್ ಪೋಸ್ಟ್ ನಲ್ಲಿರುವ ಎಂಇಎ ತಂಡದ ವಿವರ.
- ಶ್ರೀ ಎಸ್. ರಾಮ್ಜಿ. ಮೊ ನಂ- +36305199944 ವಾಟ್ಸಾಪ್ ನಂ- +917395983990
- ಶ್ರೀ ಅಂಕುರ್ ಮೊಬೈಲ್ ಮತ್ತು ವಾಟ್ಸಾಪ್ ನಂಬರ್ -36308644597
- ಶ್ರೀ ಮೋನಿತ್ ನಾಗ್ಪಾಲ್, ಮೊ ನಂ- +36302286566, ವಾಟ್ಸಾಪ್ ನಂ- +918950493059
ಪೋಲೆಂಡ್ ನ ಕ್ರಾಕೋವಿಕ್ ಭೂ ಗಡಿಯಲ್ಲಿರುವ ಎಂಇಎ ತಂಡದ ವಿವರ.
- ಶ್ರೀ ಪಂಕಜ್ ಗಾರ್ಗ್ ಮೊ ನಂ- +48660460814/ -48606700105
ಸ್ಲೋವಾಕ್ ಗಣರಾಜ್ಯ ತಂಡವು ವೈಸ್ನೆ ನೆಮೆಕೆ ಭೂ ಗಡಿಯಲ್ಲಿರುವ ಎಂಇಎ ತಂಡದ ವಿವರ
- ಶ್ರೀ ಮನೋಜ್ ಕುಮಾರ್ ಮೊ ನಂ: +421908025212
- Ms ಇವಾನ್ ಕೊಜಿಂಕಾ ಮೊ ನಂ: +421908458724
ರೊಮೇನಿಯಾದ ಸುಸೇವಾ ಭೂ ಗಡಿಯಲ್ಲಿರುವ ಎಂಇಎ ತಂಡದ ವಿವರ
- ಶ್ರೀ ಗೌಸ್ನುಲ್ ಅನ್ಸಾರಿ ಮೊ ನಂ – +40731347728
- ಶ್ರೀ ಉದ್ದೇಶ ಪ್ರಿಯದರ್ಶಿ ಮೊ ನಂ – +40724382287
- ಶ್ರೀಮತಿ ಆಂಡ್ರಾ ಹಾರ್ಲೋನೊವ್ ಮೊ ನಂ – +40763528454
- ಶ್ರೀ ಮಾರಿಯಸ್ ಸಿಮಾ ಮೊ ನಂ – +40722220823.
ಈ ಎಲ್ಲಾ ಸೇವೆಗಳನ್ನು ಸಂತ್ರಸ್ತ ಭಾರತೀಯರು ಸದುಪಯೋಗ ಪಡೆಯಬೇಕೆಂದು ಪ್ರಾಧಿಕಾರ ತನ್ನ ಆದೇಶದಲ್ಲಿ ತಿಳಿಸಿದೆ.