ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಹಿನ್ನಲೆಯಲ್ಲಿ ಇಂದೋರ್ ಪೊಲೀಸರ ವೆಬ್‌ಸೈಟ್‌ ಹ್ಯಾಕ್ ಮಾಡಿದ ದುಷ್ಕರ್ಮಿಗಳು

Prasthutha|

ಮದ್ಯಪ್ರದೇಶ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ “ಮುಕ್ತ ಕಾಶ್ಮೀರ” ಮತ್ತು ಪಾಕಿಸ್ತಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಪೋಸ್ಟ್ ಮಾಡಲಾಗಿದೆಯೆಂದು ಅರೋಪಿಸಿ ಇಂದೋರ್ ಪೊಲೀಸರ ಅಧಿಕ್ರತ ವೆಬ್‌ಸೈಟ್‌ ಅನ್ನು ಹ್ಯಾಕ್ ಮಾಡಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಇಂದೋರ್ ಪೊಲೀಸರ ಅಧಿಕ್ರತ ವೆಬ್‌ಸೈಟ್‌ ಅನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಮಧ್ಯಪ್ರದೇಶದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ , ಇನ್ಸ್ ಪೆಕ್ಟರ್ ಆಫ್ ಜನರಲ್ ಪೊಲೀಸ್ ಮತ್ತು ಇತರ ಪೊಲೀಸ್ ಸಿಬಂದಿಗಳ ವಿವರ, ಹುದ್ದೆ ಮತ್ತು ದೂರವಾಣಿ ಸಂಖ್ಯೆಗಳನ್ನೊಳಗೊಂಡ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿಯೆಂದು ವೆಬ್‌ಸೈಟ್ ಹ್ಯಾಕರ್ಸ್ ಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ‘ಮುಹಮ್ಮದ್ ಬಿಲಾಲ್ ಟೀಮ್ ಪಿಸಿಇ’ ವೆಬ್‌ಸೈಟ್‌ನಲ್ಲಿ ಸಂದೇಶ ಬರೆಯುವ ಮೂಲಕ ಅದನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದೆ.

ಇಂದೋರ್ ಪೊಲೀಸರ ವೆಬ್‌ಸೈಟ್ ನಲ್ಲಿ ‘ನಮ್ಮನ್ನು ಸಂಪರ್ಕಿಸಿ’ ಎಂದು ಹ್ಯಾಕರ್‌ಗಳು ಆಕ್ಷೇಪಾರ್ಹ ವಿಷಯ ಮತ್ತು ಘೋಷಣೆಗಳನ್ನು ಪೋಸ್ಟ್ ಮಾಡಿದ್ದಾರೆ. ಇಂದೋರ್ ಪೊಲೀಸ್ ವೆಬ್‌ಸೈಟ್ ಅನ್ನು ನಗರ ಅಪರಾಧ ವಿಭಾಗವು ನಿರ್ವಹಣೆ ಮಾಡಲಾಗುತ್ತದೆ.

- Advertisement -

ವೆಬ್‌ಸೈಟ್ ಅನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಲು ತಾಂತ್ರಿಕ ತಜ್ಞರ ಸಹಾಯದಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗುರುಪ್ರಸಾದ್ ಪರಾಶರ್ ರವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp