ಅತ್ಯಾಚಾರ ಪ್ರಕರಣ| ಐದು ತಿಂಗಳಿಂದ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಶಾಸಕರ ಪುತ್ರನ ಬಂಧನ

Prasthutha|

ಭೋಪಾಲ್: ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರೊಬ್ಬರ ಪುತ್ರನನ್ನು ಬಂಧಿಸಲಾಗಿದೆ.

- Advertisement -

ಇಂದೋರ್‌ನ ಕಾಂಗ್ರೆಸ್ ಶಾಸಕ ಮುರಳಿ ಮೋರ್ವಾಲ್‌ ಅವರ ಪುತ್ರ ಕರಣ್‌ ಮೋರ್ವಾಲ್‌ ಬಂಧಿತ ಆರೋಪಿ.

ಪೊಲೀಸರು ಇತ್ತೀಚೆಗೆ ಕರಣ್‌ನನ್ನು ಪತ್ತೆ ಹಚ್ಚಲು ಸಹಾಯ ಮಾಡುವವರಿಗೆ ನೀಡುವ ಬಹುಮಾನವನ್ನು 15,000 ರೂ.ನಿಂದ 25,000 ರೂ.ಗೆ ಹೆಚ್ಚಿಸಿದ್ದರು. ಐದು ತಿಂಗಳಿಂದ ತಲೆಮರೆಸಿಕೊಂಡಿದ್ದ ಕರಣ್ ನನ್ನು ಇಂದೋರ್‌ನ ಬದ್‌ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp