ಕಾಂಗ್ರೆಸ್‍ ನ ಎಬಿಸಿ ಗೊತ್ತಿಲ್ಲದ ವ್ಯಕ್ತಿಗಳು ಇಂತಹ ಹೇಳಿಕೆಯನ್ನು ನೀಡುತ್ತಾರೆ: ಕಪಿಲ್ ಸಿಬಲ್ ವಿರುದ್ಧ ಗೆಹ್ಲೋಟ್ ಕಿಡಿ

Prasthutha|

ಜೈಪುರ: ಕಾಂಗ್ರೆಸ್‍ ನ ಎಬಿಸಿ ಗೊತ್ತಿಲ್ಲದ ವ್ಯಕ್ತಿಗಳು ಇಂತಹ ಹೇಳಿಕೆಯನ್ನು ನೀಡುತ್ತಾರೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ನಾಯಕತ್ವದ ವಿರುದ್ಧ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಿಡಿಕಾರಿದರು.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪಿಲ್ ಸಿಬಲ್ ಅವರು ಕಾಂಗ್ರೆಸ್ ಸಂಸ್ಕೃತಿಯಿಂದ ಬಂದವರಲ್ಲ. ಅವರು ಖ್ಯಾತ ವಕೀಲರಾಗಿ ಕಾಂಗ್ರೆಸ್ ಪ್ರವೇಶಿಸಿದರು. ಅವರಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಾಕಷ್ಟು ಅವಕಾಶ ನೀಡಿದ್ದಾರೆ. ಕಾಂಗ್ರೆಸ್‍ನ ಎಬಿಸಿ ಗೊತ್ತಿಲ್ಲದ ವ್ಯಕ್ತಿಗಳು ಇಂತಹ ಹೇಳಿಕೆಯನ್ನು ನೀಡಬಹುದು ಎಂದು ಹೇಳಿದರು.

ಸಿಬಲ್ ಅವರು ಇಂತಹ ಹೇಳಿಕೆಯನ್ನು ನೀಡಿದು ದುರಾದೃಷ್ಟಕರವಾಗಿದೆ. ಪಕ್ಷವು ಚುನಾವಣೆಯಲ್ಲಿ ಸೋತಿರುವ ಸಮಯದಲ್ಲಿ ಎಲ್ಲಾ ನಾಯಕರು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

Join Whatsapp