ನವದೆಹಲಿ : ದೇಶದ ಅತಿ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಕಾಶ್ಮೀರದ 25 ವರ್ಷದ ಯುವತಿ ಆಯೆಷಾ ಅಝೀಝ್ ಪಾತ್ರರಾಗಿದ್ದಾರೆ. 2011ರಲ್ಲಿ 15 ವರ್ಷ ವಯಸ್ಸಿನವಳಾಗಿದ್ದಾಗ ವಾಯುಯಾನದ ಪರವಾನಗಿ ಪಡೆದುಕೊಂಡು ಕಿರಿಯ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಕೂಡ ಇವರು ಪಾತ್ರರಾಗಿದ್ದರು.
ರಷ್ಯಾದ ಸೊಕೊಲ್ ನಲ್ಲಿ ಮಿಗ್ 29 ಚಾಲನೆಯ ತರಬೇತಿ ಪಡೆದುಕೊಂಡಿದ್ದಾರೆ. ಬಾಂಬೆ ಫ್ಲೈಯಿಂಗ್ ಕ್ಲಬ್ ನಿಂದ ವಾಯುಯಾನದ ಪದವಿ ಪಡೆದಿರುವ ಆಯೆಷಾ, 2017ರಲ್ಲಿ ವಾಣಿಜ್ಯ ಪರವಾನಗಿಯನ್ನು ಪಡೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯೆಷಾ, ಕಾಶ್ಮೀರದ ಮಹಿಳೆಯರು ಕ್ರಮೇಣವಾಗಿ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕಾಶ್ಮೀರಿ ಸ್ತ್ರೀಯರು ಸಾಧನೆಯ ಪಥದಲ್ಲಿ ಸಾಗುತ್ತಿದ್ದಾರೆ ಎಂದಿದ್ದಾರೆ.