ವಾರ್ಸಾ: ಸೂಪರ್‌ಬಿಟ್ ರ್‍ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಮತ್ತೊಂದು ಗೆಲುವು ಸಾಧಿಸಿದ್ದಾರೆ.
ಬ್ಲಿಟ್ಜ್ ಟೂರ್ನಿಯಲ್ಲಿ ಇನ್ನೂ ಒಂಬತ್ತು ಸುತ್ತುಗಳು ಬಾಕಿ ಇರುವಾಗ, ವೀ ಯಿ ಅವರು ಮೊದಲ ದಿನದ ಏಳು ಗೆಲುವುಗಳೊಂದಿಗೆ 20.5 ಅಂಕಗಳನ್ನು ಗಳಿಸಿದ್ದಾರೆ.
ಪ್ರಸ್ತುತ ಕಾರ್ಲ್‌ಸನ್ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ 14.5 ಅಂಕಗಳೊಂದಿಗೆ ಬಹಳ ಹಿಂದಿದ್ದಾರೆ.
ಅಂತಿಮ ಫಲಿತಾಂಶ (ರ್‍ಯಾಪಿಡ್): 1.ವೀ ಯಿ ( 20.5), 2. ಮ್ಯಾಗ್ನಸ್ ಕಾರ್ಲ್‌ಸನ್ (18), 3. ಆರ್.ಪ್ರಜ್ಞಾನಂದ ( 14.5), 4. ಅರ್ಜುನ್ ಇರಿಗೇಶಿ (14), 5. ಯಾನ್ ಕ್ರಿಸ್ಟೋಫ್ ಡೂಡ (13), 6. ಅಬ್ದುಸತ್ತಾರೋವ್ (12.5), 7. ವಿನ್ಸೆಂಟ್ ಕೀಮರ್ (11.5), 8. ಕಿರಿಲ್ ಶೆವ್ಚೆಂಕೊ (11), 9. ಅನೀಶ್ ಗಿರಿ (10.5), 10. ಡಿ.ಗುಕೇಶ್ (9.5)