ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಪ್ರತಿಜ್ಞೆ : ಪ್ರಕರಣ ದಾಖಲು
Prasthutha: January 23, 2022

ಛತ್ತಿಸ್ ಗಡ: ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವುದಾಗಿ ಪ್ರತಿಜ್ಞೆ ಮಾಡಿ, ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ವೀಡಿಯೋಗೆ ಸಂಬಂಧಿಸಿದಂತೆ ಪ್ರಮೋದ್ ಅಗರ್ವಾಲ್ ಎಂಬಾತನ ವಿರುದ್ಧ ಛತ್ತೀಸ್‌ಗಡ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಛತ್ತೀಸ್‌ಗಡದ ಕೊರ್ಬಾದಲ್ಲಿ ಬೆಂಕಿಯ ಸುತ್ತ ಸೇರಿದ ಗುಂಪೊಂದು ಧರ್ಮದ ಆಧಾರದ ಮೇಲೆ ತಾರತಮ್ಯ ಆಚರಿಸುವುದಾಗಿ ಪ್ರತಿಜ್ಞೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ “ಇಂದು, ನಾವೆಲ್ಲಾ ಬಾಕಿನೋಂಗ್ರ ನಗರದ ಕೊಬ್ರ ಜಿಲ್ಲೆ ಛತ್ತಿಸ್ ಗಡ ರಾಜ್ಯದ ನಿವಾಸಿಗಳು ಹಿಂದೂಗಳಾಗಿದ್ದು, ಈ ಬೆಂಕಿಯನ್ನು ಸಾಕ್ಷಿಯಾಗಿಸಿ ಭಾರತವನ್ನು ತೀವ್ರವಾದಿ ಹಿಂದೂ ರಾಷ್ಟ್ರವನ್ನಾಗಿಸುತ್ತೆವೆ ಎಂದು ಪ್ರಮಾಣ ಮಾಡುತ್ತೇವೆ. ನಾವು ನಮ್ಮ ಸಂಸ್ಥೆಗಳಲ್ಲಿ, ಮನೆಯಲ್ಲಿ ಮತ್ತು ವ್ಯವಹಾರಗಳಲ್ಲಿ ಹಿಂದೂ ಸಹೋದರರನ್ನು ಮಾತ್ರ ಸೇರಿಸಿಕೊಳ್ಳುತ್ತೆವೆ ಮತ್ತು ಇದರಿಂದ ಹಿಂದುತ್ವವನ್ನು ಬಲಿಷ್ಠಗೊಳಿಸುತ್ತೆವೆ” ಎಂದು ಹಿಂದಿಯಲ್ಲಿ ಪ್ರತಿಜ್ಞೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಟ್ವಾಲಿ ಪೋಲಿಸ್ ಠಾಣೆಯಲ್ಲಿ ಲಿಖಿತ ದೂರನ್ನು ದಾಖಲಿಸಿದ್ದಾರೆ.
