ಕೊಯಮತ್ತೂರು: ಭಾರತದ ಮೊದಲ ಖಾಸಗಿ ರೈಲು ಕಾರ್ಯಾರಂಭ ಮಾಡಿದ್ದು, ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸಲಿದೆ ಎಂದು ತಿಳಿದು ಬಂದಿದೆ.
ಭಾರತೀಯ ರೈಲ್ವೆ ಸೇವೆ ಆರಂಭವಾದ ಬಳಿಕ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಪ್ರಯಾಣಿಕರ ರೈಲು ಸೇವೆ ಆರಂಭವಾಗಿದ್ದು, ಕೇಂದ್ರ ಸರ್ಕಾರದ ‘ಭಾರತ್ ಗೌರವ್’ ಯೋಜನೆಯಡಿ ಇದು ಚಾಲನೆಗೊಂಡಿದೆ.
ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವುದು” ಎಂದು ರೈಲ್ವೆ ಸಚಿವಾಲಯವು ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಕೆಲವು ಫೋಟೋಗಳನ್ನು ಟ್ವೀಟ್ ಮಾಡಿದ್ದು, ರೈಲಿನ ಮೊದಲ ಪ್ರಯಾಣವನ್ನು ಘೋಷಿಸಿದೆ. ‘ಭಾರತ್ ಗೌರವ್’ ಯೋಜನೆಯಡಿ ತನ್ನ ಮೊದಲ ನೋಂದಾಯಿತ ಸೇವಾ ಪೂರೈಕೆದಾರರನ್ನು ಪಡೆದ ಮೊದಲ ವಲಯವಾಗಿ ದಕ್ಷಿಣ ರೈಲ್ವೆ ಹೊರಹೊಮ್ಮಿದೆ ಮತ್ತು ಕೊಯಮತ್ತೂರು ಉತ್ತರದಿಂದ ಸಾಯಿನಗರ್ ಶಿರಡಿವರೆಗೆ ಮೊದಲ ಸೇವೆಯ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಎಂದು ಟ್ವೀಟ್ ಮಾಡಿದೆ.