ದೇಶದ ಮೊದಲ ಮುಸ್ಲಿಮ್ ಪೈಲೆಟ್ ಆಗಿ ಸಾನಿಯಾ ಮಿರ್ಜಾ ಆಯ್ಕೆ

Prasthutha|

ಲಕ್ನೋ: ಉತ್ತರ ಪ್ರದೇಶದ ಸಾನಿಯಾ ಮಿರ್ಜಾ ಎಂಬ ಯುವತಿ, ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್  ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಿರ್ಜಾ ಭಾರತೀಯ ವಾಯುಸೇನೆಯಲ್ಲಿ ಪೈಲಟ್ ಆಗಿ ಆಯ್ಕೆಯಾದ ದೇಶದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

- Advertisement -

ಉತ್ತರ ಪ್ರದೇಶದ ಮಿರ್ಜಾಪುರ್ ದೇಹತ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಸೋವರ್ ಗ್ರಾಮದ ನಿವಾಸಿಯಾಗಿರುವ ಮಿರ್ಜಾ ಅವರ ತಂದೆ ಟಿವಿ ಮೆಕ್ಯಾನಿಕ್ ಆಗಿದ್ದಾರೆ.

ಹಿಂದಿ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ಸಾನಿಯಾ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ ಡಿಎ) ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಇದೀಗ ವಾಯುಪಡೆಯ ಪೈಲಟ್ ತರಬೇತಿಗೆ ಆಯ್ಕೆಯಾಗಿದ್ದಾರೆ. ಡಿ.27 ಕ್ಕೆ ಪುಣೆಯ ಎನ್ ಡಿಎ ಖಡಕ್ ವಾಸ್ಲಾಕ್ಕೆ ಅವರು ದಾಖಲಾಗಲಿದ್ದು, ಅಲ್ಲಿ ಅವರಿಗೆ ಪೈಲಟ್ ತರಬೇತಿ ನಡೆಯಲಿದೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಿರ್ಜಾ ಅವರ ತಂದೆ ಶಾಹಿದ್ ಅಲಿ, “ಸಾನಿಯಾ ಮಿರ್ಜಾ ಮೊದಲಿನಿಂದಲೂ, ದೇಶದ ಮೊದಲ ಫೈಟರ್ ಪೈಲಟ್ ಅವನಿ ಚತುರ್ವೇದಿ ಅವರನ್ನು ತನ್ನ ರೋಲ್ ಮಾಡೆಲ್ ಆಗಿ ತೆಗೆದುಕೊಂಡಿದ್ದು, ಅವರಂತೆಯೇ ಆಗಲು ಬಯಸಿದ್ದಳು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ನನ್ನ ಈ ಸಾಧನೆಯನ್ನು ತಂದೆ ತಾಯಿ, ನಾನು ಕಲಿತ ಸೆಂಚೂರಿಯನ್ ಡಿಫೆನ್ಸ್ ಅಕಾಡೆಮಿಗೆ ಅರ್ಪಣೆ ಮಾಡುತ್ತೇನೆ. 2022ರ ಎನ್ ಡಿಎ ಪರೀಕ್ಷೆಯಲ್ಲಿ, ಫೈಟರ್ ಪೈಲಟ್ ವಿಭಾಗದಲ್ಲಿ ಮಹಿಳೆಯರಿಗೆ ಕೇವಲ ಎರಡು ಸ್ಥಾನಗಳನ್ನು ಮಾತ್ರ ಕಾಯ್ದಿರಿಸಲಾಗಿತ್ತು. ಎರಡನೇ ಪ್ರಯತ್ನದಲ್ಲಿ ನಾನು ತೇರ್ಗಡೆಯಾದೆ ಎಂದು ಸಾನಿಯಾ ತಿಳಿಸಿದ್ದಾರೆ.

Join Whatsapp