ಭಾರತದ ಮೊದಲ ಸ್ವಯಂಚಾಲಿತ ವಿಮಾನ ಹಾರಾಟ ಯಶಸ್ವಿ

Prasthutha|

ನವದೆಹಲಿ: ಭಾರತದ ಮೊದಲ ಸ್ವಯಂ ಚಾಲಿತ ವಿಮಾನವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಶುಕ್ರವಾರ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ ನಿಂದ ನಡೆಸಲಾದ ಈ ಪರೀಕ್ಷೆಯನ್ನು ಮಾನವರಹಿತ ವಿಮಾನಗಳ ಅಭಿವೃದ್ಧಿಯಲ್ಲಿ ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

- Advertisement -

“ಸಂಪೂರ್ಣ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತಿರುವ ಈ ವಿಮಾನವು ಟೇಕ್-ಆಫ್, ವೇಪಾಯಿಂಟ್ ನ್ಯಾವಿಗೇಶನ್ ಮತ್ತು ನಯವಾದ ಭೂಸ್ಪರ್ಶ ಸೇರಿದಂತೆ ಪರಿಪೂರ್ಣ ಹಾರಾಟವನ್ನು ಪ್ರದರ್ಶಿಸಿತು. ಭವಿಷ್ಯದ ಮಾನವರಹಿತ ವಿಮಾನಗಳ ಅಭಿವೃದ್ಧಿಯ ಕಡೆಗೆ ನಿರ್ಣಾಯಕ ತಂತ್ರಜ್ಞಾನಗಳನ್ನು ಸಾಬೀತುಪಡಿಸುವ ದೃಷ್ಟಿಯಿಂದ ಈ ಹಾರಾಟವು ಒಂದು ಪ್ರಮುಖ ಮೈಲಿಗಲ್ಲಾಗಿದೆ. ಅಲ್ಲದೆ ಅಂತಹ ವ್ಯೂಹಾತ್ಮಕ ರಕ್ಷಣಾ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯತ್ತ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಮಾನವ ರಹಿತ ವಿಮಾನವನ್ನು ಡಿಆರ್ ಡಿಒದ  ಸಂಶೋಧನಾ ಸಂಸ್ಥೆಯಾದ ವೈಮಾನಿಕ ಅಭಿವೃದ್ಧಿ ಸಂಸ್ಥಾಪನೆ (ಎಡಿಇ) ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿದೆ.



Join Whatsapp