ಗಾಝಾ ನಿರಾಶ್ರಿತರಿಗೆ ಭಾರತದ ನೆರವು: ಮೆಚ್ಚುಗೆ ವ್ಯಕ್ತಪಡಿಸಿದ UNRWA

Prasthutha|

UNRWA

- Advertisement -

ವಿಶ್ವಸಂಸ್ಥೆ: ಭಾರತವು ನೆರವಿನ ಮೊತ್ತ ಬಿಡುಗಡೆ ಮಾಡಿದ ಮರು ದಿನವೇ ವಿಶ್ವಸಂಸ್ಥೆಯ ಪರಿಹಾರ ಕಾರ್ಯದ ಏಜೆನ್ಸಿ (UNRWA) ಭಾರತದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತ ಬಿಡುಗಡೆ ಮಾಡಿರುವ ಎರಡನೇ ಕಂತಿನ ಸುಮಾರು ₹ 20.80 ಕೋಟಿ ಮೊತ್ತವು ಪ್ಯಾಲೆಸ್ತೀನ್‌ನಲ್ಲಿ ನಿರಾಶ್ರಿತರ ಜೀವ ರಕ್ಷಣೆ ಕೆಲಸಗ ಮುಂದುವರಿಸಲು ನೆರವಾಗಲಿದೆ ಎಂದು ಹೇಳಿದೆ.

- Advertisement -

ಗಾಝಾದಲ್ಲಿ ಅತ್ಯಂತ ಕಷ್ಟಕರವಾದ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದು ಪುನರುಚ್ಚರಿಸಿದ ಏಜೆನ್ಸಿ ವಕ್ತಾರ Tamara Alrifai, ಪ್ಯಾಲೆಸ್ತೀನ್ ನಿರಾಶ್ರಿತರ ಪರ ಇರುವ ರಾಷ್ಟ್ರಗಳಿಗೆ ಏಜೆನ್ಸಿಯು ಕೃತಜ್ಞವಾಗಿರಲಿದೆ ಎಂದು ಹೇಳಿದ್ದಾರೆ.

UNRWA 1950ರಿಂದ ನೋಂದಾಯಿತ ಪ್ಯಾಲೆಸ್ತೀನ್ ನಿರಾಶ್ರಿತರಿಗೆ ನೇರವಾಗಿ ಪರಿಹಾರ ಒದಗಿಸುವ ಕಾರ್ಯ ನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿಯಾಗಿದೆ.



Join Whatsapp