ಭಾರತೀಯರು ಇಸ್ರೇಲ್ ಜೊತೆಗೆ ನಿಂತಿದ್ದಾರೆ: ಪ್ರಧಾನಿ ಮೋದಿ

Prasthutha|

►ಇಸ್ರೇಲ್ ಪ್ರಧಾನಿ ನೇತನ್ಯಾಹುರೊಂದಿಗೆ ಮೋದಿ ದೂರವಾಣಿಯಲ್ಲಿ ಮಾತುಕತೆ

- Advertisement -


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಮಾಸ್ ದಾಳಿ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.


ಈ ಬಗ್ಗೆ ಪ್ರಧಾನಿ ಮೋದಿ ಎಕ್ಸ್ ಮಾಡಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಸದ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು, ಈ ಸಂಕಷ್ಟದ ಸಮಯದಲ್ಲಿ ಭಾರತೀಯರು ಇಸ್ರೇಲ್ ಜತೆಗೆ ನಿಂತಿದ್ದಾರೆ. ಭಾರತವು ಎಲ್ಲ ರೀತಿ ಭಯೋತ್ಪಾದನೆಯನ್ನು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ ಎಂದು ಎಕ್ಸ್ನಲ್ಲಿ ಮೋದಿ ಬರೆದುಕೊಂಡಿದ್ದಾರೆ.

- Advertisement -


ಇಸ್ರೇಲ್ ಮೇಲೆ ಶನಿವಾರದಂದು ಹಮಾಸ್ ನಡೆಸಿದ ದಾಳಿಯ ಬಗ್ಗೆ ಪ್ರಧಾನಿ ಮೋದಿ ಅವರು ಕಳವಳ ವ್ಯಕ್ತಪಡಿಸಿ, ಈ ವಿಚಾರ ಕೇಳಿ ನನಗೆ ತುಂಬಾ ಅಘಾತವಾಗಿದೆ. ಈ ದಾಳಿಯಿಂದ ಸಾವನ್ನಪ್ಪಿರುವ ಜನರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ದೇವರನ್ನು ಪ್ರಾರ್ಥಿಸುತ್ತೇವೆ. ಈ ಸಂಕಷ್ಟದ ಸಮಯದದಲ್ಲಿ ಇಸ್ರೇಲ್ ಜತೆಗೆ ನಾವು ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

Join Whatsapp